ಜಿಎಂಯು, ಒಸಾಕ ವಿಶ್ವವಿದ್ಯಾನಿಲಯ ಮಧ್ಯೆ ವೈದ್ಯಕೀಯ ಶಿಕ್ಷಣ, ಸಂಶೋಧನೆ ಜೊತೆಗಾರಿಕೆ

Update: 2019-08-28 14:52 GMT

ಅಜ್ಮನ್,ಆ.28: ತಮ್ಮ ಜೊತೆಗಾರಿಕೆಯನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ದಿರುವ ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯ, ಅಜ್ಮನ್ ಮತ್ತು ಜಪಾನ್‌ನ ಒಸಾಕ ವಿಶ್ವವಿದ್ಯಾನಿಲಯ ಉಭಯ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ, ಸಿಬ್ಬಂದಿ ಮತ್ತು ಸಂಶೋಧಕರಿಗೆ ಅನೇಕ ಅವಕಾಶಗಳನ್ನು ಮತ್ತು ಲಾಭಗಳನ್ನು ಕಲ್ಪಿಸಿದೆ.

ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಜೊತೆಗಾರಿಕೆಯ ಸಾಧ್ಯತೆ ಮತ್ತು ವಿಸ್ತಾರವನ್ನು ಗಣನೀಯವಾಗಿ ಹೆಚ್ಚಿಸಲಿರುವ ಒಪ್ಪಂದಕ್ಕೆ ಜಿಎಂಯು ಕುಲಪತಿ ಪ್ರೊ. ಹೊಸಮ್ ಹಮ್ದಿ ಹಾಗೂ ಒಸಾಕ ಸಿಟಿ ವಿಶ್ವವಿದ್ಯಾನಿಲಯದ ಡೀನ್ ಪ್ರೊ. ಕೆಂಜಿ ಒಹಟ ಅವರು ಆಗಸ್ಟ್ 9ರಂದು ಸಹಿ ಹಾಕಿದರು.

ಮಧ್ಯಪ್ರಾಚ್ಯದ ಪ್ರತಿಷ್ಟಿತ ವೈದ್ಯಕೀಯ ವಿಶ್ವವಿದ್ಯಾನಿಲಯವಾಗಿರುವ ಜಿಎಂಯು ಮತ್ತು ಜಪಾನ್‌ನ ಅತ್ಯುನ್ನತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿರುವ ಒಸಿಯು ಈಗಾಗಲೇ ವಿದ್ಯಾರ್ಥಿಗಳ ಬದಲಾಣೆ ಮತ್ತು ಜಂಟಿ ಶಿಕ್ಷಣ ಮತ್ತು ತರಬೇತಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡಿವೆ. ಈ ಒಪ್ಪಂದವನ್ನು ಫಲಪ್ರದಗೊಳಿಸಲು ಜಿಎಂಯು ನಿರಂತರ ಶಿಕ್ಷಣತಜ್ಞರು, ವಿದ್ಯಾರ್ಥಿಗಳು ಮತ್ತು ಸಂಶೋಧಕರ ಜೊತೆ ಸಮಾಲೋಚನೆ ನಡೆಸುತ್ತಲೇ ಇದ್ದರೆ ಮತ್ತೊಂದೆಡೆ ಜಪಾನ್‌ನಲ್ಲಿ ತನ್ನ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮದ ಭಾಗವಾಗಿ ಒಸಿಯು ವಿದ್ಯಾರ್ಥಿಗಳಿಗೆ ಪರಿವೀಕ್ಷಣಾ ಕಾರ್ಯಕ್ರಮ ಆಯೋಜಸುತ್ತಿದೆ.

ಒಪ್ಪಂದದ ಕುರಿತು ಮಾತನಾಡಿರುವ ಪ್ರೊ. ಹೊಸಮ್ ಹಮ್ದಿ, ಈ ಜೊತೆಗಾರಿಕೆಯಿಂದ ಎರಡು ವಿಶ್ವವಿದ್ಯಾನಿಲಯಗಳ ನಡುವೆ ಮತ್ತಷ್ಟು ಅವಕಾಶಗಳು ಮತ್ತು ಸಾಧ್ಯತೆಗಳು ತೆರೆದುಕೊಳ್ಳಲಿದೆ ಎಂದು ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News