ಎಎಂಇಇ ವಾರ್ಷಿಕ ಸಮ್ಮೇಳನ, 'ಭವಿಷ್ಯಕ್ಕಾಗಿ ಯೋಜನೆ' ಕಾರ್ಯಗಾರ

Update: 2019-09-03 17:27 GMT

ವಿಯೆನ್ನ, ಸೆ.3: ಆಸ್ಟ್ರಿಯದ ವಿಯೆನ್ನದಲ್ಲಿ ನಡೆದ ಪ್ರತಿಷ್ಠಿತ ಯುರೋಪ್‌ನ ವೈದ್ಯಕೀಯ ಶಿಕ್ಷಣ ಸಂಘಟನೆ (ಎಎಂಇಇ) ಯ ಭಾಗವಾಗಿ ಗಲ್ಫ್ ಮೆಡಿಕಲ್ ಯುನಿವರ್ಸಿಟಿ (ಜಿಎಂಯು) ಕುಲಪತಿ ಪ್ರೊ. ಹೊಸಮ್ ಹಮ್ದಿ ಮತ್ತು ವೈದ್ಯಕೀಯ ಶಿಕ್ಷಣದ ಉಪನ್ಯಾಸಕ ಪ್ರೊ. ಡೇವಿಡ್ ಟೇಲರ್, ವೈದ್ಯಕೀಯ ಶಿಕ್ಷಣದಲ್ಲಿ ಆವಿಷ್ಕಾರದ ಮೂಲಕ ಗುಣಮಟ್ಟ: ಭವಿಷ್ಯಕ್ಕಾಗಿ ಯೋಜನೆ ವಿಷಯದಲ್ಲಿ ಕಾರ್ಯಗಾರ ಆಯೋಜಿಸಿದರು.

ಈ ಸಮ್ಮೇಳನದಲ್ಲಿ ಜಗತ್ತಿನ ಪ್ರತಿಷ್ಟಿತ ಸಂಸ್ಥೆಗಳಿಗೆ ಸೇರಿದ 4500ಕ್ಕೂ ಅಧಿಕ ಅಂತರ್‌ ರಾಷ್ಟ್ರೀಯ ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರರು ಹಾಗೂ ಬೋಧಕರು ಭಾಗವಹಿಸಿದ್ದರು.

ಈ ಕಾರ್ಯಗಾರದಲ್ಲಿ ಪ್ರೊ.ಹಮ್ದಿಯವರು ವ್ಯಕ್ತಪಡಿಸಿದ ವಿಷಯದ ಪ್ರಮುಖ ಅಂಶವೆಂದರೆ, ವೈದ್ಯಕೀಯ ಕಾಲೇಜ್‌ಗಳು ಮಾಹಿತಿದಾರನಿಂದ ಪರಿವರ್ತನೆಕಾರಕನಾಗುವ ಭಾಗವಾಗಿ ಭವಿಷ್ಯದಲ್ಲಿ ಮಹತ್ತರ ಬದಲಾವಣೆಗಳನ್ನು ಕಾಣಲಿದೆ ಎನ್ನುವುದು. ವೈದ್ಯಕೀಯ ಕ್ಷೇತ್ರ ಒಂದು ಸಮಾಜ ವಿಜ್ಞಾನ ಇದ್ದಂತೆ, ಅದು ಜನರು, ಸಮಾಜ ಮತ್ತು ಮಾನವ ಸಂವಹನಗಳನ್ನು ನಿಬಾಯಿಸಬೇಕಾಗುತ್ತದೆ. ಇವುಗಳು ವೇಗವಾಗಿ ಬದಲಾಗುತ್ತಿರುವ ಆರೋಗ್ಯ ಸೇವೆ ವ್ಯವಸ್ಥೆಯಲ್ಲಿ ಪ್ರತ್ಯೇಕಿಸಲಾಗದಂತವು. ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದಂತೆ ನಾವು ದೃಢವಾಗಿ  ಒಂದು ವಿಷಯದಲ್ಲಿ ಭವಿಷ್ಯ ನುಡಿಯಬಹುದು, ಅದೆಂದರೆ, ಮುಂದಿನ ಕೆಲವು ದಶಕಗಳವರೆಗೆ ರೋಗಿ, ವೈದ್ಯ ಮತ್ತು ವೈದ್ಯಕೀಯ ವಿದ್ಯಾರ್ಥಿ ಎಲ್ಲರೂ ಮಾನವರಾಗಿಯೇ ಇರುತ್ತಾರೆ. ಅವರು ಯಾವ ರೀತಿ ಸಂವಹನೆ ನಡೆಸುತ್ತಾರೆ, ಸಮಾಲೋಚಿಸುತ್ತಾರೆ ಮತ್ತು ಅರ್ಥೈಸಿಕೊಳ್ಳುತ್ತಾರೆ ಎನ್ನುವುದಷ್ಟೇ ಬದಲಾಗುತ್ತದೆ ಎಂದು ಪ್ರೊ. ಹಮ್ದಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News