ಭವಿಷ್ಯದ 472 ಆರೋಗ್ಯಸೇವೆ ವೃತ್ತಿಪರರನ್ನು ಸ್ವಾಗತಿಸಿದ ಜಿಎಂಯು

Update: 2019-09-12 17:36 GMT

ಅಜ್ಮನ್,ಸೆ.12: ಮಧ್ಯಪ್ರಾಚ್ಯದ ಅಗ್ರಮಾನ್ಯ ವೈದ್ಯಕೀಯ ವಿಶ್ವವಿದ್ಯಾಲಯ ಗಲ್ಫ್ ಮೆಡಿಕಲ್ ಯುನಿವರ್ಸಿಟಿ ಮುಂದಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳನ್ನು ಸೆಪ್ಟಂಬರ್ 12ರಂದು ನಡೆದ ವೈಟ್ ಕೋಟ್ ಸಮಾರಂಭದಲ್ಲಿ ಸ್ವಾಗತಿಸಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಆರೋಗ್ಯಸೇವೆ ವೃತ್ತಿಭವಿಷ್ಯಕ್ಕೆ ತಮ್ಮ ಪ್ರವೇಶದ ಚಿಹ್ನೆಯಾಗಿ ಬಿಳಿ ಕೋಟ್‌ಗಳನ್ನು ಪಡೆದರು.

 ಜಿಎಂಯು ಕುಲಪತಿ ಪ್ರೊ. ಹೊಸ್ಸಮ್ ಹಮ್ದಿ ಅಧ್ಯಕ್ಷತೆ ವಹಿಸಿದ್ದ ವೈಟ್ ಕೋಟ್ ಸಮಾರಂಭದಲ್ಲಿ ಜಿಎಂಯು ಸಂಸ್ಥಾಪಕ, ಟ್ರಸ್ಟಿಗಳ ಮಂಡಳಿ ಅಧ್ಯಕ್ಷ ಡಾ. ತುಂಬೆ ಮೊಯಿದಿನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ನೂತನವಾಗಿ ದಾಖಲಾಗಿರುವ 472 ವಿದ್ಯಾರ್ಥಿಗಳು ಜಿಎಂಯುನ ಆರು ಕಾಲೇಜುಗಳಲ್ಲಿ ವಿವಿಧ ವೈದ್ಯಕೀಯ ಮತ್ತು ಆರೋಗ್ಯಸೇವೆ ಕೋರ್ಸ್‌ಗಳನ್ನು ಕಲಿಯುತ್ತಿರುವ 80ಕ್ಕೂ ಹೆಚ್ಚು ರಾಷ್ಟ್ರಗಳ ವಿದ್ಯಾರ್ಥಿಗಳನ್ನು ಸೇರಲಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಪ್ರೊ. ಹೊಸ್ಸಮ್ ಹಮ್ದಿ, ಜಗತ್ತಿನಲ್ಲಿ ಸಂವಹನ,ಪ್ರಯಾಣ, ರೋಗಿಗಳಿಗೆ ಚಿಕಿತ್ಸೆ, ತಂತ್ರಜ್ಞಾನದ ಬಳಕೆ ಸೇರಿದಂತೆ ಎಲ್ಲವೂ ವೇಗವಾಗಿ ಬದಲಾಗುತ್ತದೆ. ಆದರೆ ಬದಲಾಗದಿರುವುದು ಕೇವಲ ಒಂದು ಅದು ಮಾನವನ ನಡುವಿನ ಸಂವಹನ. ರೋಗಿಗಳು, ವಿದ್ಯಾರ್ಥಿಗಳು, ಆರೋಗ್ಯಸೇವೆ ಪೂರೈಕೆದಾರರು ಮತ್ತು ವೈದ್ಯಕೀಯ ಶಿಕ್ಷಕರು ಎಲ್ಲರೂ ಮನುಷ್ಯರೇ. ಯಾವ ರೀತಿ ಸಂವಹನ ನಡೆಸಲಾಗುತ್ತದೆ, ಸಂಪರ್ಕ ಬೆಸೆಯಲಾಗುತ್ತದೆ ಮತ್ತು ಅನುಭವಿಸಲಾಗುತ್ತದೆ ಎನ್ನುವುದು ಪ್ರಮುಖವಾಗುತ್ತದೆ ಎಂದು ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News