ದುಬೈ: ತುಂಬೆ ಆಸ್ಪತ್ರೆಯಿಂದ ಡಾ. ಯು.ಟಿ. ಇಫ್ತಿಕಾರ್ ರಿಗೆ ವಿಶೇಷ ಗೌರವ ಪ್ರಶಸ್ತಿ

Update: 2019-09-14 17:46 GMT

ದುಬೈ, ಸೆ.14: ಕರ್ನಾಟಕ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಫಿಸಿಯೋಥೆರಪಿ ವಿಭಾಗದ ಉಪನ್ಯಾಸಕ ಮತ್ತು ಸಿಂಡಿಕೇಟ್ ಸದಸ್ಯ ಡಾ. ಯು.ಟಿ ಇಫ್ತಿಕಾರ್ ಅವರಿಗೆ ಪುನರ್ವಸತಿ ಮತ್ತು ಔಷಧಿಯಲ್ಲಿ ಆವಿಷ್ಕಾರದ ಕುರಿತ 2ನೇ ವಾರ್ಷಿಕ ಅಂತರ್‌ ರಾಷ್ಟ್ರೀಯ ಸಮ್ಮೇಳನದಲ್ಲಿ ವಾರ್ಷಿಕ ದೈಹಿಕ ಚಿಕಿತ್ಸೆ ಮತ್ತು ಪುನರ್ವಸತಿ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗೆ ವಿಶೇಷ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಎರಡು ದಿನಗಳ ಈ ಕಾರ್ಯಕ್ರಮವನ್ನು ತುಂಬೆ ಫಿಸಿಕಲ್ ಥೆರಪಿ ಆ್ಯಂಡ್ ರಿಹ್ಯಬಿಲಿಟೇಶನ್ ಹಾಸ್ಪಿಟಲ್ ಸೆ. 13 ಮತ್ತು 14ರಂದು ತುಂಬೆ ಮೆಡಿಸಿಟಿಯಲ್ಲಿ ಆಯೋಜಿಸಿತ್ತು. ಯುಎಇಯ ಆರೋಗ್ಯ ಸಚಿವಾಲಯದಿಂದ ಪ್ರಮಾಣೀಕೃತ ಸಮ್ಮೇಳನವನ್ನು ವಿಶ್ವ ಫಿಸಿಯೋಥೆರಪಿ ದಿನದ ಅಂಗವಾಗಿ ಆಯೋಜಿಸಲಾಗಿತ್ತು.

ಅಂತರ್‌ ರಾಷ್ಟ್ರೀಯ ಪ್ರತಿಷ್ಠಿತ ಭಾಷಣಕಾರರು ಮತ್ತು ತಜ್ಞರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ತಮ್ಮ ದೃಷ್ಟಿಕೋನ ಮತ್ತು ಪರಿಕಲ್ಪನೆಯನ್ನು ಹಂಚಿಕೊಂಡರು. ಪ್ರತಿಷ್ಠಿತ ಶಸ್ತ್ರಚಿಕಿತ್ಸಕರು, ಫಿಸಿಯೊಥೆರಪಿಸ್ಟ್‌ಗಳು ಮತ್ತು ಇತರ ವೈದ್ಯಕೀಯ ವೃತ್ತಿಪರರನ್ನೊಳಗೊಂಡ 250ಕ್ಕೂ ಅಧಿಕ ಜನರು ಈ ಕಾರ್ಯಕ್ರಮದಲ್ಲಿ ಪ್ರೇಕ್ಷಕರಾಗಿ ಭಾಗವಹಿಸಿದ್ದರು.

ಅಜ್ಮನ್‌ನ ರೂಲರ್ಸ್ ಕೋರ್ಟ್‌ನ ಮುಖ್ಯಸ್ಥರಾದ ಶೇಕ್ ಡಾ.ಮಜಿದ್ ಬಿನ್ ಸಯೀದ್ ನುವಾಮಿ ಈ ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದರೆ ತುಂಬೆ ಗ್ರೂಪ್‌ನ ಸ್ಥಾಪಕ ಡಾ. ತುಂಬೆ ಮೊಯಿದಿನ್ ಅವರು ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಶೇಕ್ ಡಾ. ಮಜಿದ್ ಬಿನ್ ಸಯೀದ್ ನುವಾಮಿ ಅವರು, ಇಟಲಿಯ ವೆಲ್ಡುಸ್ ವಿಲ್ಲ ಬೆರೆಟ್ಟ ರಿಹ್ಯಾಬಿಲಿಟೇಶನ್ ಸೆಂಟರ್ ನಿರ್ದೇಶಕ ಡಾ. ಫ್ರಾಂಕೊ ಮೊಲ್ಟೆನಿ, ಕರ್ನಾಟಕ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಫಿಸಿಯೋಥೆರಪಿ ವಿಭಾಗದ ಉಪನ್ಯಾಸಕ ಮತ್ತು ಸಿಂಡಿಕೇಟ್ ಸದಸ್ಯ ಡಾ. ಯು.ಟಿ ಇಫ್ತಿಕಾರ್ ಹಾಗೂ ಮಾನ್ಯತೆ ಪಡೆದ ಫಿಫಾ ಮೆಡಿಕಲ್ ಸೆಂಟರ್ ಆಫ್ ಎಕ್ಸಲೆನ್ಸ್‌ನ ಮಾಲಕ ಮತ್ತು ಮೆಡಿಕಲ್ ನಿರ್ದೇಶಕ ಡಾ.ಯಾಸಿನ್ ಝೆರ್ಗುನಿ ಅವರಿಗೆ ವಿಶೇಷ ಗೌರವ ಪ್ರಶಸ್ತಿ ಮತ್ತು ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News