ವಾಶಿಂಗ್ಟನ್ ಸ್ಟೇಟ್ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದಕ್ಕೆ ಸಹಿಹಾಕಿದ ಗಲ್ಫ್ ಮೆಡಿಕಲ್ ಯುನಿವರ್ಸಿಟಿ

Update: 2019-09-24 15:53 GMT

ಅಜ್ಮನ್, ಸೆ. 24: ಶಿಕ್ಷಣ, ತರಬೇತಿ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಪರಸ್ಪರ ಸಹಕಾರವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಅಜ್ಮನ್‌ನ ಗಲ್ಫ್ ಮೆಡಿಕಲ್ ಯುನಿವರ್ಸಿಟಿ (ಜಿಎಂಯು)ನ ಕಾಲೇಜ್ ಆಫ್ ಫಾರ್ಮಸಿ ಅಮೆರಿಕದ ವಾಶಿಂಗ್ಟನ್ ಸ್ಟೇಟ್ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ಜಿಎಂಯು ಕುಲಪತಿ ಪ್ರೊ. ಹೊಸಮ್ ಹಮ್ದಿ ಮತ್ತು ಫಾರ್ಮಸಿ ವಿಭಾಗದ ಡೀನ್ ಡಾ. ಶರೀಫ್ ಖಲೀಫ ಹಾಗೂ ವಾಶಿಂಗ್ಟನ್ ಸ್ಟೇಟ್ ವಿಶ್ವವಿದ್ಯಾಲಯದ ಕಾಲೇಜ್ ಆಫ್ ಫಾರ್ಮಸಿ ಆ್ಯಂಡ್ ಫಾರ್ಮಸುಟಿಕಲ್ ಸಾಯನ್ಸ್‌ನ ಪ್ರಬಾರ ಡೀನ್ ಲಿಂಡಾ ಗರೆಲ್ಟ್ಸ್ ಮ್ಯಾಕ್‌ಲೀನ್ ಹಾಗೂ ಅಂತರ್‌ರಾಷ್ಟ್ರೀಯ ಕಾರ್ಯಕ್ರಮಗಳ ಉಪಾಧ್ಯಕ್ಷ ಡಾ. ಆಸಿಫ್ ಚೌಧರಿ ಸೆಪ್ಟಂಬರ್ 22ರಂದು ಜಿಎಂಯುನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು. ಒಪ್ಪಂದದಂತೆ, ಜಿಎಂಯು ಮತ್ತು ವಾಶಿಂಗ್ಟನ್ ಸ್ಟೇಟ್ ವಿಶ್ವವಿದ್ಯಾಲಯ ಶಿಕ್ಷಣ ಮತ್ತು ಸಂಶೋಧನಾ ಚಟುವಟಿಕೆಗಳು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಬದಲಾವಣೆ, ಮಾಹಿತಿ ಹಂಚಿಕೆ ಮತ್ತು ತರಬೇತಿಯ ಅಭಿವೃದ್ಧಿಗೆ ಒಟ್ಟಾಗಿ ಕೆಲಸ ಮಾಡಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಜಿಎಂಯು ಕುಲಪತಿ ಪ್ರೊ. ಹೊಸಮ್ ಹಮ್ದಿ, ಈ ಒಪ್ಪಂದ ಅನೇಕ ಪರಸ್ಪರ ಲಾಭದಾಯಕ ಕ್ಷೇತ್ರಗಳಲ್ಲಿ ಜೊತೆಯಾಗಿ ಸಾಗುವ ಜಿಎಂಯು ಮತ್ತು ಡಬ್ಲೂಎಸ್‌ಯುನ ದೀರ್ಘ ಕಾಲೀನ ಜೊತೆಗಾರಿಕೆಯ ಆರಂಭವಾಗಿದೆ ಎಂದು ತಿಳಿಸಿದ್ದಾರೆ. ನಂತರ ಮಾತನಾಡಿದ ಪ್ರೊ.ಶರೀಫ್ ಖಲೀಫ, ಇದೊಂದು ವಿಶಿಷ್ಟ ಜೊತೆಗಾರಿಕೆಯಾಗಿದ್ದು ಇದರ ಫಲವಾಗಿ ತುಂಬೆ ವಿಶ್ವವಿದ್ಯಾಲಯ ಆಸ್ಪತ್ರೆಯಲ್ಲಿ ಅತ್ಯತ್ತಮ ಔಷಧ ಮಾಹಿತಿ ಸೇವೆ ದೊರಕಲಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News