ಕತರ್: ಕ್ಯೂಐಎಸ್ಎಫ್ ‘ಸ್ವಾತಂತ್ರ್ಯದ ಕಾವಲುಗಾರರಾಗಿ’ ಜನಜಾಗೃತಿ ಸಭೆಯ ಸಮಾರೋಪ

Update: 2019-09-28 18:03 GMT

ಕತರ್: ಒಂದು ತಿಂಗಳಿನಿಂದ ಕತಾರ್ ನ ವಿವಿಧ ಸ್ಥಳಗಳಲ್ಲಿ ನಡೆದ ‘ಸ್ವಾತಂತ್ರ್ಯದ ಕಾವಲುಗಾರರಾಗಿ’ ಎಂಬ ಜನಜಾಗೃತಿ ಸಭೆಯ ಅಭಿಯಾನದ ಅಂಗವಾಗಿ, ವಿವಿಧ ಕಡೆಗಳಲ್ಲಿ ಕಾರ್ನರ್ ಮೀಟ್ ಹಾಗೂ ಸಾರ್ವಜನಿಕ ಕಾರ್ಯಕ್ರಮ ನಡೆಸುವುದರ ಮೂಲಕ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಲಾಯಿತು. ಇದರ ಸಮಾರೋಪ ಸಮಾವೇಶ ಕಾರ್ಯಕ್ರಮವು ಶುಕ್ರವಾರ ದೋಹಾದ ಮನ್ಸೂರದಲ್ಲಿ ಕ್ಯೂಐಎಸ್ಎಫ್ ಕರ್ನಾಟಕ ರಾಜ್ಯದ ಅಧ್ಯಕ್ಷರಾದ ನಝೀರ್ ಪಾಷರ ಸಭಾಧ್ಯಕ್ಷತೆಯಲ್ಲಿ ನಡೆಯಿತಯ.

ನಝೀರ್ ಪಾಷ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕತಾರ್ ಇಂಡಿಯನ್ ಸೋಶಿಯಲ್ ಫೋರಮ್ ಕೇಂದ್ರ ಸಮಿತಿಯ ಅಧ್ಯಕ್ಷ ಸಯೀದ್ ಕೋಮಾಚಿ, ಮುಸ್ಲಿಮ್, ದಲಿತ ಹಾಗೂ ಅಲ್ಪಸಂಖ್ಯಾಂತ ಸಮುದಾಯದ ಮೇಲೆ ನಡೆಯುತ್ತಿರುವ ನಿರಂತರ ಹಲ್ಲೆಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಹೋರಾಡದಿದ್ದರೆ, ಅವರ ಈ ಅಟ್ಟಹಾಸ ಇಡೀ ದೇಶಕ್ಕೆ ಮಾರಕವಾಗಿ ಪರಿಣಮಿಸಲಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ, ಕತಾರ್ ಇಂಡಿಯನ್ ಫ್ರೆಟರ್ನಿಟಿ ಪೋರಂನ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಯ್ಯೂಬ್ ಉಳ್ಳಾಲ, ತಮ್ಮ ಭಾಷಣದಲ್ಲಿ ಭಾರತ ದೇಶಾದ್ಯಂತ ನಡೆಯುತ್ತಿರುವ ಪ್ರಸಕ್ತ ಸನ್ನೀವೇಶಗಳ ಬಗ್ಗೆ ವಿವರಿಸಿದರು.

ಕತಾರ್ ಇಂಡಿಯನ್ ಸೋಶಿಯಲ್ ಪೋರಮ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಫಸೀವುದ್ದೀನ್ ಮಾತನಾಡಿ, ಮುಸ್ಲಿಮ್ ಸಮುದಾಯ ಹಾಗೂ ದಲಿತ ಸಮುದಾಯದ ಮತಗಳನ್ನು ಪಡೆದು ಜಯಗಳಿಸಿದ ನಾಯಕರು ನಂತರ ನಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಬೇಡಿಕೆಗಳ ಬಗ್ಗೆ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಚರ್ಚಿಸದೇ ಇರುವುದು ದುರಂತವೇ ಸರಿ ಎಂದು ಹೇಳಿದರು.

ಅತಿಥಿಗಳಾಗಿ ಆಗಮಿಸಿದ್ದ, ಕರ್ನಾಟಕ ಮುಸ್ಲಿಮ್ ಕಲ್ಚರಲ್ ಅಸೋಸಿಯೇಷನ್ ನ ಉಪಾಧ್ಯಕ್ಷರಾದ ಸಾಖಿಬ್ ರಜಾ಼ ಖಾನ್ ಮಾತನಾಡಿ, ಸಮುದಾಯದ ಒಗ್ಗಟ್ಟಿನಲ್ಲಿ ಬಲವಿದೆ ಎಲ್ಲರೂ ಒಗ್ಗೂಡವುದು ಕಾಲದ ಬೇಡಿಕೆಯಾಗಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಇತರ ಅತಿಥಿಗಳಾಗಿ, ಕತರ್ ಡಯೆರ್ ನ ಹಿರಿಯ ವ್ಯವಸ್ಥಾಪಕರಾದ ರಿಯಾಝ್ ಶೇಖ್, ಸೌತ್ ಕೆನರ ಮುಸ್ಲಿಂ ವೆಲ್ಫೇರ್ ಅಸೋಷಿಯೇಷನ್ ನ ಉಪಾಧ್ಯಕ್ಷರಾದ ಅಬ್ದುಲ್ ಖಾಸಿಂ ಉಡುಪಿ ಪ್ರಸ್ತಾವಿಕವಾಗಿ ಮಾತನಾಡಿದರು

ಆಕ್ಸಿಯಂ ಟ್ರೇಡಿಂಗ್ ಹಾಗೂ ರಹಮಾ ಲಿಮೋಸಿನ್ ನ ವ್ಯವಸ್ಥಾಪಕ‌ ನಿರ್ದೇಶಕರಾದ ಶಾಕಿರ್, ಕೋರ್ ಟ್ರೇಡ್ ನ ವ್ಯವಸ್ಥಾಪಕರಾದ ಸುಹೈಲ್ ಲಾಲಮಿಯಾನ್ ಮತ್ತು ಸೌತ್ ಕೆನರ ಮುಸ್ಲಿಂ ವೆಲ್ಫೇರ್ ಅಸೋಷಿಯೇಷನ್ ನ ಅಧ್ಯಕ್ಷರಾದ ಅಬ್ದುಲ್ ಮಜೀದ್ ಉಪಸ್ಥಿತರಿದ್ದರು.

ನಿಯಾಝ್ ತೋಡಾರ್ ಸ್ವಾಗತಿಸಿದರು. ಶಾಕೀರ್ ಪುಂಜಾಲಕಟ್ಟೆ ಧನ್ಯವಾದಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News