ದುಬೈ: ತುಂಬೆ ಯುನಿವರ್ಸಿಟಿ ಆಸ್ಪತ್ರೆಯಿಂದ ಉಚಿತ ವೈದ್ಯಕೀಯ ಶಿಬಿರ, ಆರೋಗ್ಯ ಉತ್ಸವ

Update: 2019-10-19 17:05 GMT

ಅಜ್ಮನ್ : ತುಂಬೆ ಯುನಿವರ್ಸಿಟಿ ಆಸ್ಪತ್ರೆ ಅಜ್ಮನ್ 'ಆರೋಗ್ಯ ಉತ್ಸವ ಮತ್ತು ಉಚಿತ ಮೆಗ ವೈದ್ಯಕೀಯ ಶಿಬಿರ' ಶುಕ್ರವಾರ ಆಯೋಜಿಸಿದ್ದು 40ಕ್ಕೂ ಅಧಿಕ ರಾಷ್ಟ್ರದ 2,500ಕ್ಕೂ ಅಧಿಕ ಮಂದಿ ಈ ಶಿಬಿರದ ಲಾಭ ಪಡೆದರು.

ತುಂಬೆ ಗ್ರೂಪ್ ಸಂಸ್ಥಾಪಕ ಡಾ. ತುಂಬೆ ಮೊಯಿದಿನ್ ಅವರು ಶಿಬಿರಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ತುಂಬೆ ಗ್ರೂಪ್‌ನ ಆರೋಗ್ಯ ಸೇವೆ ವಿಭಾಗದ ಉಪಾಧ್ಯಕ್ಷ ಅಕ್ಬರ್ ಮೊಯಿದಿನ್ ತುಂಬೆ, ತುಂಬೆ ಯುನಿವರ್ಸಿಟಿ ಆಸ್ಪತ್ರೆಯ ಚೀಫ್ ಆಪರೇಟಿಂಗ್ ಆಫಿಸರ್ ಡಾ. ಮುಹಮ್ಮದ್ ಫೈಸಲ್ ಪರ್ವೇಝ್ ಮತ್ತು ತುಂಬೆ ಗ್ರೂಪ್‌ನ ಆಡಳಿತಾತ್ಮಕ ತಂಡದ ಇತರ ಸದಸ್ಯರು ಉಪಸ್ಥಿತರಿದ್ದರು.

ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಒಂದು ಗಂಟೆಗಳ ಅವಧಿಯ ಯೋಗ ಕಾರ್ಯಕ್ರಮ ನಡೆಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಲಾಯಿತು.

ತುಂಬೆ ಯುನಿವರ್ಸಿಟಿ ಆಸ್ಪತ್ರೆ, ತುಂಬೆ ಫಿಸಿಕಲ್ ಥೆರಪಿ ಆ್ಯಂಡ್ ರಿಹ್ಯಾಬಿಲಿಟೇಶನ್ ಹಾಸ್ಪಿಟಲ್ ಮತ್ತು ತುಂಬೆ ಡೆಂಟಲ್ ಹಾಸ್ಪಿಟಲ್ ಹೀಗೆ ತುಂಬೆ ಮೆಡಿಸಿಟಿಯ ಎಲ್ಲ ಮೂರು ಆಸ್ಪತ್ರೆಗಳಲ್ಲಿ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9ರವರೆಗೆ ಉಚಿತ ವೈದ್ಯಕೀಯ ಶಿಬಿರ ನಡೆಸಲಾಯಿತು.

ಈ ಸಂದರ್ಭದಲ್ಲಿ ಶಿಬಿರಕ್ಕೆ ಭೇಟಿ ನೀಡುವವರಿಗೆ ತಜ್ಞ ವೈದ್ಯರಿಂದ ಉಚಿತ ಸಲಹೆ, ಉಚಿತ ಔಷಧಿ ಮತ್ತು ದರ ಕಡಿತ ರೋಗ ಪತ್ತೆ ಪರೀಕ್ಷೆಗಳು ಮತ್ತು ಪ್ರಯೋಗಾಲಯ ದರಗಳು. ಉಚಿತ ಇಸಿಜಿ ಮತ್ತು ಅಲ್ಟ್ರಸೌಂಡ್ ಪರೀಕ್ಷೆಗಳನ್ನು ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News