ದುಬೈ: ಎಲ್ಲ ಟ್ಯಾಕ್ಸಿಗಳಲ್ಲಿ ಕಣ್ಗಾವಲು ಕ್ಯಾಮರಾ

Update: 2019-10-21 16:52 GMT

ದುಬೈ, ಅ. 21: ದುಬೈಯ ರಸ್ತೆಗಳಲ್ಲಿ ಚಲಿಸುವ ಎಲ್ಲ ಟ್ಯಾಕ್ಸಿಗಳಿಗೆ ದುಬೈಯ ರಸ್ತೆ ಮತ್ತು ಸಾರಿಗೆ ಪ್ರಾಧಿಕಾರ (ಆರ್‌ಟಿಎ) ಕಣ್ಗಾವಲು ಕ್ಯಾಮರಾಗಳನ್ನು ಅಳವಡಿಸಿದೆ. ಟ್ಯಾಕ್ಸಿ ಪ್ರಯಾಣಗಳ ವೇಳೆ ನಿಯಮಗಳ ಉಲ್ಲಂಘನೆಯ ದೂರುಗಳು ಬಂದರೆ ಕ್ಯಾಮರದ ಚಿತ್ರಗಳನ್ನು ಪರಿಶೀಲಿಸಲಾಗುವುದು ಎಂದು ‘ಗಲ್ಫ್ ನ್ಯೂಸ್’ ವರದಿ ಮಾಡಿದೆ. ಈ ಕ್ರಮದಿಂದಾಗಿ ದೂರುಗಳ ಸಂಖ್ಯೆಯು ಕಡಿಮೆಯಾಗುವುದು ಎಂದು ಆರ್‌ಟಿಎ ಹೇಳಿದೆ.

ಈ ಕ್ಯಾಮರಾ ವ್ಯವಸ್ಥೆಯಲ್ಲಿ ಸೆನ್ಸರ್‌ಗಳಿರುತ್ತವೆ. ಪ್ರಯಾಣಿಕರು ವಾಹನಗಳಿಗೆ ಹತ್ತಿದ ಕೂಡಲೇ ಸೆನ್ಸರ್‌ಗಳು ಸ್ವಯಂಚಾಲಿತವಾಗಿ ಸಕ್ರಿಯಗೊಳ್ಳುತ್ತವೆ.

 ‘‘ದುಬೈಯಲ್ಲಿರುವ ಎಲ್ಲ 10,684 ಟ್ಯಾಕ್ಸಿಗಳಲ್ಲಿ ಕಣ್ಗಾವಲು ಕ್ಯಾಮರಗಳನ್ನು ಅಳವಡಿಸಲಾಗಿದೆ. ಇದು ಚಾಲಕರ ವೃತ್ತಿಪರತೆ ಮತ್ತು ನಡವಳಿಕೆಯನ್ನು ಹೆಚ್ಚಿಸಲಿದೆ. ಪ್ರಯಾಣಿಕರೊಂದಿಗೆ ವ್ಯವಹರಿಸುವಾಗ ಚಾಲಕರು ಅತ್ಯುತ್ತಮ ರೀತಿಯಿಂದ ವರ್ತಿಸುವುದನ್ನು ಇದು ಖಾತರಿಪಡಿಸುತ್ತದೆ’’ ಎಂದು ಆರ್‌ಟಿಎಯ ಸಾರ್ವಜನಿಕ ಸಾರಿಗೆ ಸಂಸ್ಥೆಯಲ್ಲಿ ಸಾರಿಗೆ ವ್ಯವಸ್ಥೆಗಳ ನಿರ್ದೇಶಕ ಖಾಲಿದ್ ಅಲ್ ಅವದಿ ಹೇಳುತ್ತಾರೆ.

2017ರಲ್ಲಿ ಅಳವಡಿಕೆ ಆರಂಭ

ಟ್ಯಾಕ್ಸಿಗಳಲ್ಲಿ ಕ್ಯಾಮರಾಗಳ ಅಳವಡಿಕೆ ಕಾರ್ಯ 2017 ಆಗಸ್ಟ್‌ನಲ್ಲಿ ಆರಂಭಗೊಂಡಿತ್ತು ಹಾಗೂ ಹಂತ ಹಂತವಾಗಿ ಮುಂದುವರಿಯಿತು.

ದುಬೈ ಸರಕಾರದ ‘ಜನರ ನೆಮ್ಮದಿ’ ಮತ್ತು ಸ್ಮಾರ್ಟ್ ಸಿಟಿ ಕಾರ್ಯಕ್ರಮಗಳಿಗೆ ಪೂರಕವಾಗಿ ಬಾಡಿಗೆ ಕಾರುಗಳಲ್ಲಿ ಕ್ಯಾಮರಗಳ ಅಳವಡಿಕೆ ಕಾರ್ಯ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News