ಸೌದಿ: ನೂತನ ವಿದೇಶ ಸಚಿವರ ನೇಮಕ

Update: 2019-10-24 16:46 GMT

ರಿಯಾದ್, ಅ. 24: ಸೌದಿ ಅರೇಬಿಯ ಬುಧವಾರ ಪಾಶ್ಚಿಮಾತ್ಯ ದೇಶಗಳಲ್ಲಿ ರಾಜತಾಂತ್ರಿಕತೆಯ ಅನುಭವವಿರುವ ರಾಜಕುಮಾರರೊಬ್ಬರನ್ನು ವಿದೇಶ ಸಚಿವರಾಗಿ ನೇಮಿಸಿದೆ. ಸೌದಿ ಅರೇಬಿಯ ತನ್ನ ಅಂತರ್‌ರಾಷ್ಟ್ರೀಯ ಸ್ಥಾನಮಾನವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಗಳನ್ನು ನಡೆಸುತ್ತಿರುವ ಹಾಗೂ ಜಿ20 ದೇಶಗಳ ಗುಂಪಿನ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲು ಸಿದ್ಧತೆಗಳನ್ನು ನಡೆಸುತ್ತಿರುವ ಹಂತದಲ್ಲಿ ಈ ಬೆಳವಣಿಗೆ ನಡೆದಿದೆ.

 ನೂತನ ವಿದೇಶ ಸಚಿವ ರಾಜಕುಮಾರ ಫೈಝಲ್ ಬಿನ್ ಫರ್ಹಾನ್ ಅಲ್ ಸೌದ್ ಕಳೆದ ಕೆಲವು ತಿಂಗಳುಗಳಿಂದ ಜರ್ಮನಿಯ ರಾಯಭಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಅದಕ್ಕೂ ಮೊದಲು ಅವರು ವಾಶಿಂಗ್ಟನ್‌ನಲ್ಲಿರುವ ಸೌದಿ ಅರೇಬಿಯದ ರಾಯಭಾರಿ ಕಚೇರಿಯಲ್ಲಿ ರಾಜಕೀಯ ಸಲಹೆಗಾರರಾಗಿದ್ದರು.

ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆ ಮತ್ತು ಯೆಮನ್‌ನಲ್ಲಿ ನಡೆಯುತ್ತಿರುವ ವಿನಾಶಕಾರಿ ಯುದ್ಧ ಸೇರಿದಂತೆ ಹಲವು ವಿಷಯಗಳಲ್ಲಿ ಪಾಶ್ಚಾತ್ಯ ದೇಶಗಳಿಂದ ಮಾನವಹಕ್ಕು ಉಲ್ಲಂಘನೆಯ ಆರೋಪಗಳನ್ನು ಸೌದಿ ಅರೇಬಿಯ ಎದುರಿಸುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News