ದುಬೈ: ಕೆಸಿಎಫ್ ನಾರ್ತ್ ಝೋನ್ ನಿಂದ ಪ್ರತಿಭೋತ್ಸವ ಕಾರ್ಯಕ್ರಮ

Update: 2019-11-03 09:31 GMT

ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ದುಬೈ ನಾರ್ತ್ ಝೋನ್  ವತಿಯಿಂದ ‘ಅರಿವಿನ ಕ್ರಾಂತಿಗೆ ಪ್ರತಿಭೆಗಳ ನಡಿಗೆ’ ಎಂಬ ಶೀರ್ಷಿಕೆಯಡಿ ನವೆಂಬರ್ 1 ರಂದು ದುಬೈ ದೇರಾದ  ಪರ್ಲ್ ಸಿಟಿ ಸೂಟ್ಸ್ ಹೋಟೆಲ್ ಸಭಾಂಗಣದಲ್ಲಿ ಪ್ರತಿಭೋತ್ಸವ ಕಾರ್ಯಕ್ರಮ ಆಯೋಜಿಸಲಾಯಗಿತ್ತು.

ಈ ಪ್ರಯುಕ್ತ ಅನಿವಾಸಿ ಕನ್ನಡಿಗರ ಹಾಗೂ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಿರಾಅತ್, ಕನ್ನಡ, ಇಂಗ್ಲಿಷ್, ಮಲಯಾಳಂ ಭಾಷೆಗಳಲ್ಲಿ ಭಾಷಣ, ಪದ್ಯ, ಮಾಪಿಳಪ್ಪಾಟ್, ಅರೇಬಿಕ್ ಹಾಡು, ಕವನ ರಚನೆ, ಕ್ವಿಝ್, ಬುರ್ದಾ, ದಫ್ ಮುಂತಾದ ಸ್ಫರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಪ್ರಥಮ, ದ್ವಿತೀಯ, ಬಹುಮಾನ ಹಾಗೂ ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರೋತ್ಸಾಹ ಬಹುಮಾನಗಳನ್ನು ನೀಡಲಾಯಿತು.   ಸ್ತ್ರೀಯರಿಗಾಗಿ  ರುಚಿಕರ ಆಹಾರ ತಯಾರಿಸುವ ವಿಶೇಷ  ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಮುಹಮ್ಮದ್ ಅಲಿ ಕನ್ಯಾನ, ರಹೀಮ್ ಕೋಡಿ, ರಫೀಕ್  ಕಲ್ಲಡ್ಕ, ಶಾಹುಲ್ ಹಮೀದ್ ಸಖಾಫಿ, ಹಂಝ ಎರ್ಮಾಡ್, ತಮೀಮ್ ಜೌಹರಿ ನಾಪೋಕ್ಲು  ಮತ್ತಿತರರು ಸ್ಪರ್ಧಾ ತೀರ್ಪೂಗಾರರಾಗಿ ಭಾಗವಹಿಸಿದ್ದರು.

ಅಬ್ದುಲ್ ಫತ್ತಾಹ್ ತಂಙಳ್  ದುಆಗೈದರು. ಅಬೂಬಕರ್ ಹಾಜಿ ಕೊಟ್ಟಮುಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಝೋನ್ ಅಧ್ಯಕ್ಷ ಇಸ್ಮಾಯೀಲ್ ಮದನಿ ನಗರ, ಶಿಕ್ಷಣ ವಿಭಾಗದ ಅಬ್ದುಲ್ ಅಝೀಝ್ ಲತೀಫಿ, ಅರಾಫತ್ ನಾಪೋಕ್ಲು ಮೊದಲಾದವರು ವೇದಿಕೆಯಲ್ಲಿದ್ದರು.

ರಿಯಾಝ್ ಕೊಂಡಂಗೇರಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News