ತುಳುಕೂಟ ಕತರ್ ಸಂಸ್ಥೆಯಿಂದ 'ತುಳು ಜಾತ್ರೆ'

Update: 2019-11-03 15:01 GMT

ಕತರ್: ತುಳುನಾಡಿನ ಸಾಂಪ್ರದಾಯಿಕ ಆಹಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ತುಳುಕೂಟ ಕತರ್ ಸಂಸ್ಥೆ ವತಿಯಿಂದ 'ತುಳು ಜಾತ್ರೆ' ಎಂಬ ವಿಭಿನ್ನ ಕಾರ್ಯಕ್ರಮ ಕತರ್ ನ ಓಲ್ಡ್ ಇಂಡಿಯಾ ಐಡಿಯಲ್ ಶಾಲೆಯ ಮೈದಾನದಲ್ಲಿ ಇತ್ತೀಚೆಗೆ ನಡೆಯಿತು.

ತುಳುಕೂಟದ ಕಾರ್ಯದರ್ಶಿ ಹಾಗು ಸಮಾರಂಭದ ಮಾಸ್ಟರ್ ನವೀನ್ ಶೆಟ್ಟಿ ಇರುವೈಲ್ ಕಾರ್ಯಕ್ರಮದ ಬಗ್ಗೆ ಮತ್ತು ಅದರ ಹಿಂದಿನ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು. ತುಳುಕೂಟ ಅಧ್ಯಕ್ಷೆ ಚೈತಾಲಿ ಉದಯ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿ ನಂತರ ಸ್ವಾಗತಿಸಿದರು.

ಜಾತ್ರೆಯ ಪ್ರಾರಂಭದಲ್ಲೇ ಕತರ್ ನ ಮೂಲೆ ಮೂಲೆಗಳಿಂದ ತಂಡೋಪ ತಂಡವಾಗಿ ಜನರು ಆಗಮಿಸಿ ಜಾತ್ರೆಯ ಅಲಂಕಾರವನ್ನು  ಮನಗಂಡು, ತುಂಬಿದ ಆಹಾರದ ಸ್ಟಾಲ್ ಗಳಲ್ಲಿ  ಮನೆಯಲ್ಲಿ ಬೇಯಿಸಿದ ತುಳುನಾಡಿನ ರುಚಿಕರವಾದ ಆಹಾರವನ್ನು ಸವಿದು, ತುಳುನಾಡ ಮಣ್ಣಿನ ಆಟೋಟ ಪಂದ್ಯಗಳಲ್ಲಿ ಪಾಲ್ಗೊಂಡು ಮತ್ತು ತುಳು ಗೀತೆಗೆ ಕುಣಿದು ಕುಪ್ಪಳಿಸಿದರು.

ಗೂಡು ಅಂಗಡಿ, ಚರ್ಮುರಿ ಸ್ಟಾಲ್, ವಿವಿಧ ಆಹಾರದ ಕ್ಯಾಂಟೀನ್ ಗಳು, ಮ್ಯಾಡ್ ಜಾಹೀರಾತುಗಳಲ್ಲಿನ ಸ್ಪರ್ಧೆಗಳು, ಮೊನೊ ನಟನೆ ಮತ್ತು ತ್ವರಿತ ಬಹುಮಾನಗಳೊಂದಿಗೆ ಮೋಜಿನ ಆಟಗಳಾದ ತಾರಾಯ್ದ ಕಟ್ಟಾ ಮತ್ತು ಕೋಳಿ ಅಂಕ ವಿಶೇಷ ಆಕರ್ಷಣೆಗಳಾಗಿದ್ದವು. ಎಲ್ಲಾ ಸಮುದಾಯದ ಮುಖಂಡರು, ತುಳುಕೂಟದ ಆಡಳಿತ ಸಮಿತಿ ಹಾಗೂ ಸ್ವಯಂ ಸೇವಕರು ಒಗ್ಗೂಡಿ, ಸಾಂಪ್ರದಾಯಿಕ ಆಟಗಳು, ಆಹಾರ ಮತ್ತು ಸಂಸ್ಕೃತಿಯ ಅಂಶಗಳನ್ನು ಅಚ್ಚುಕಟ್ಟಾಗಿ ಆಚರಣೆಗೆ ತರಲು ಪ್ರಮುಖ ರೀತಿಯಲ್ಲಿ ಕೊಡುಗೆ ನೀಡಿದರು.

ಅಡ್ವಾನ್ಸ್ ಟೆಕ್ನಿಕಲ್ ಸರ್ವೀಸಸ್ ಕತರ್ (ಎಟಿಎಸ್) ಮುಖ್ಯ ಪ್ರಾಯೋಜಕರಾಗಿ ಸಹಕರಿಸಿದರು. ಜಾತ್ರೆಗೆ ಬೆಂಬಲ ಪ್ರಾಯೋಜಕರಾಗಿ ಅಸ್ಮತ್ ಅಲಿ ಮತ್ತು ಕೈರಾಲಿ ರೆಸ್ಟೋರೆಂಟ್ ಸಹಕರಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಮತ್ತು ಭಾರತ ಮಾತ್ರವಲ್ಲದೆ ವಿವಿಧ ದೇಶಗಳ ಜನರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News