ಕತರ್: ಕ್ಯೂ.ಐ.ಎಸ್.ಎಫ್.ನಿಂದ ಡಾ.ಸಫ್ವಾನ್ ಅಹ್ಮದ್‌ರಿಗೆ ಸನ್ಮಾನ

Update: 2019-11-05 04:36 GMT

ದೋಹಾ, ನ.5: ಬೆಂಗಳೂರಿನಲ್ಲಿ ನಿಮ್ಹಾನ್ಸ್‌ನಲ್ಲಿ ಇತ್ತೀಚೆಗೆ ನಡೆದ ಘಟಿಕೋತ್ಸವದಲ್ಲಿ ಬೇಸ್ಟ್ ಪೋಸ್ಟ್ ಗ್ರಾಜ್ಯುಯೇಟ್ ರೆಸಿಡೆಂಟ್ ಇನ್ ನ್ಯೂರೋಲಜಿ-2019 ಪ್ರಶಸ್ತಿಗೆ ಭಾಜನರಾದ ಕೈಕಂಬದ ಡಾ.ಸಫ್ವಾನ್ ಅಹ್ಮದ್ ಅವರನ್ನು ಕತರ್ ಇಂಡಿಯಾ ಸೋಶಿಯಲ್ ಫೋರಂ(ಕ್ಯೂ.ಐ.ಎಸ್.ಎಫ್.) ಸೋಮವಾರ ಸನ್ಮಾನಿಸಿತು.

ಕತರ್‌ಗೆ ಭೇಟಿ ನೀಡಿದ್ದ ಡಾ.ಸಫ್ವಾನ್ ಅಹ್ಮದ್ ಅವರನ್ನು ಕತರ್ ನ ಮನ್ಸೂರದಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಮುಹಮ್ಮದ್ ಬಿನ್ ಹಾಶಿಂ ರಹ್ಮಾನ್ ಅವರ ಕಿರಾಅತ್ ಪಠಣದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.

ಕ್ಯೂ.ಐ.ಎಸ್.ಎಫ್. ಉಪಾಧ್ಯಕ್ಷ ಝಿಯಾವುಲ್ ಹಕ್ ಬೆಂಗಳೂರು ಮುಖ್ಯ ಭಾಷಣ ಮಾಡಿದರು

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಸಫ್ವಾನ್ ಅಹ್ಮದ್, ತಾನು ಬೆಳೆದು ಬಂದ ಹಾದಿ ಹಾಗೂ ನ್ಯೂರೋಲಜಿಯ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಿದರು.

 ಇದೇ ಸಂದರ್ಭ ಸುಮಾರು ಅರ್ಧಗಂಟೆಗಳ ಕಾಲ ಡಾ.ಸಫ್ವಾನ್ ಅಹ್ಮದ್ ಪ್ರಶ್ನೋತ್ತರ ಕಾರ್ಯಕ್ರಮ ನಡೆಸಿಕೊಟ್ಟರು.

ಡಾ.ಸಫ್ವಾನ್ ರನ್ನು ಕತರ್ ಪ್ರಟರ್ನಿಟಿ ಫೋರಂ ರಾಜ್ಯಾಧ್ಯಕ್ಷ ಅಯ್ಯೂಬ್ ಉಳ್ಳಾಲ ಹಾಗೂ ಕ್ಯೂ.ಐ.ಎಸ್.ಎಫ್. ಕರ್ನಾಟಕ ಘಟಕದ ರಾಜ್ಯಾಧ್ಯಕ್ಷ ನಝೀರ್ ಪಾಶಾ ಶಾಲು ಹೊದಿಸಿ, ಪುರಸ್ಕಾರ ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಡಾ.ಸಫ್ವಾನ್ ಅವರ ಪತ್ನಿ, ಮಂಗಳೂರಿನ ಕೆಎಂಸಿಯಲ್ಲಿ ರೇಡಿಯಾಲಜಿಯಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿರುವ ಡಾ.ಫಾತಿಮಾ ರಯೀಸಾ, ರಯೀಸಾರ ತಂದೆ ಮುಮ್ತಾಝ್ ಹುಸೈನ್, ಎಸ್.ಕೆ.ಎಂ.ಡಬ್ಲು.ಎ. -ಕತರ್ ಅಧ್ಯಕ್ಷ ಇಂಜಿನಿಯರ್ ಮಜೀದ್ ಮತ್ತಿತರರು ಉಪಸ್ಥಿತರಿದ್ದರು.

ಇಸಾಕ್ ಕೆ.ಎಲ್. ಸ್ವಾಗತಿಸಿದರು. ಫಸೀಉದ್ದೀನ್ ತುಮಕೂರು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News