ದುಬೈ: ಕನ್ನಡಿಗರು ದುಬೈ ಸಂಘದಿಂದ ನ.8ರಂದು ಕನ್ನಡ ರಾಜ್ಯೋತ್ಸವ

Update: 2019-11-05 12:32 GMT

ಮುಖ್ಯ ಅತಿಥಿಯಾಗಿ ಡಾ.ಸುಧಾ ಮೂರ್ತಿ
ದುಬೈ, ನ.5: ಕನ್ನಡಿಗರು ದುಬೈ ಸಂಘದಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ನ.8ರಂದು ನಾದಲ್ ಅಲ್ ಶಿಬಾದಲ್ಲಿರುವ ಹಾರ್ಟ್ ಲ್ಯಾಂಡ್ ಇಂಟರ್‌ನ್ಯಾಶನಲ್ ಶಾಲೆಯಲ್ಲಿ ನಡೆಯಲಿದೆ ಎಂದು ಸಂಘಟಕರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅಂದು ಸಂಜೆ 4:3ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಸಂಸ್ಥೆಯ ಸಾಂತ್ವನ ಚಾರಿಟಿ ವಿಭಾಗವಾದ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಪದ್ಮಶ್ರೀ ಪುರಸ್ಕೃತೆ ಡಾ.ಸುಧಾಮೂರ್ತಿಯವರನ್ನು ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.

 ಅತಿಥಿಗಳಾಗಿ ಭಾರತೀಯ ಸೇನೆಯಲ್ಲಿದ್ದ ಕ್ಯಾಪ್ಟನ್ ನವೀನ್ ನಾಗಪ್ಪ, ದುಬೈ ಭಾರತೀಯ ದೂತಾವಾಸ ಕೇಂದ್ರದ ಕಾನ್ಸುಲೇಟ್ ಜನರಲ್ ವಿಪುಲ್ ಶರ್ಮ, ದುಬೈಯಲ್ಲಿ ನಡೆಯುವ ಕನ್ನಡ ಕಾರ್ಯಕ್ರಮಗಳ ಪೋಷಕಮಹಮ್ಮದ್ ಮುಸ್ತಫಾ ಹಾಗೂ ಫಾರ್ಚ್ಯೂನ್ ಹೋಟೆಲ್ಸ್ ಗ್ರೂಪ್ ನ ನಿರ್ವಾಹಕ ನಿರ್ದೇಶಕ ರವೀಶ್ ಗೌಡ ಭಾಗವಹಿಸುವರು ಎಂದು ತಿಳಿಸಿದರು.

ಖ್ಯಾತ ನಿರೂಪಕಿ ಆರ್ ಜೆ ಸಿರಿ ಕಾರ್ಯಕ್ರಮ ನಿರೂಪಿಸುವರು. ನೃತ್ಯ ದಿಷಾ ಟ್ರಸ್ಟ್ ಬೆಂಗಳೂರು ತಂಡದಿಂದ ಹಾಗೂ ಯುನೈಟೆಡ್ ಅರಬ್ ಎಮಿರೇಟಿನಲ್ಲಿ ನೆಲೆಸಿರುವ ಕನ್ನಡ ಶಾಲಾ ಮಕ್ಕಳಿಂದ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದವರು ವಿವರಿಸಿದರು.

 ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಮಾಜಿ ಅಧ್ಯಕ್ಷರಾದ ಉಮಾ ವಿದ್ಯಾಧರ್, ವೀರೇಂದ್ರ ಬಾಬು, ಸದನ್ ದಾಸ್, ಕನ್ನಡಿಗರು ದುಬೈ ಸಂಘದ ಸಮಿತಿಯ ಸದಸ್ಯರಾದ ಅರುಣ್ ಕುಮಾರ್, ದೀಪಕ್ ಸೋಮಶೇಖರ್, ಚಂದ್ರಕಾಂತ್, ವಿಜಯ ಶಿವರುದ್ರಪ್ಪ, ಮಮತಾ ರಾಘವೇಂದ್ರ, ಮಲ್ಲಿಕಾರ್ಜುನ ಅಂಗಡಿ, ಶ್ರೀನಿವಾಸ್ ಅರಸ್ ಬೆಂಗಳೂರು, ವೆಂಕಟರಮಣ ಕಾಮತ್, ರಫೀಕ್ ಅಲಿ ಕೊಡಗು, ವಿನೀತ್ ರಾಜ್, ಮಧು ದಾವಣಗೆರೆ, ಚಂದ್ರಶೇಖರ್ ಪೂಜಾರಿ ಮಂಗಳೂರು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News