ತನ್ನಲ್ಲಿ 6ನೇ ಅತಿ ದೊಡ್ಡ ತೈಲ ನಿಕ್ಷೇಪ: ಯುಎಇ

Update: 2019-11-05 17:58 GMT

ದುಬೈ, ನ. 5: ತನ್ನಲ್ಲಿ ಜಗತ್ತಿನ 6ನೇ ಅತಿ ದೊಡ್ಡ ತೈಲ ನಿಕ್ಷೇಪಗಳಿವೆ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಹೇಳಿದೆ. ಇದರೊಂದಿಗೆ ಅದು ಕುವೈತನ್ನು ಹಿಂದಕ್ಕೆ ಹಾಕಿದೆ.

ಯುಎಇಯ ಸುಪ್ರೀಮ್ ಪೆಟ್ರೋಲಿಯಂ ಕೌನ್ಸಿಲ್ ಸೋಮವಾರ ಸಭೆ ಸೇರಿ ಈ ಸುದ್ದಿಯನ್ನು ಪ್ರಕಟಿಸಿತು. ಅರೇಬಿಯ ಪರ್ಯಾಯ ದ್ವೀಪದಲ್ಲಿರುವ ಏಳು ಅರಬ್ ದೇಶಗಳ ಒಕ್ಕೂಟವು, 700 ಕೋಟಿ ‘ಸ್ಟಾಕ್ ಟ್ಯಾಂಕ್’ ಬ್ಯಾರೆಲ್‌ನಷ್ಟು ಹೊಸ ತೈಲ ನಿಕ್ಷೇಪಗಳನ್ನು ಪತ್ತೆಹಚ್ಚಿದೆ ಎಂದು ಅದು ಹೇಳಿದೆ.

ಇದರೊಂದಿಗೆ ಯುಎಇಯ ಒಟ್ಟು ತೈಲ ನಿಕ್ಷೇಪಗಳು 10,500 ಕೋಟಿ ಬ್ಯಾರಲ್‌ಗಳಿಗೆ ಏರಿದೆ ಎಂದು ಸಮಿತಿ ತಿಳಿಸಿದೆ.

ನೈಸರ್ಗಿಕ ಅನಿಲ ನಿಕ್ಷೇಪದಲ್ಲೂ ಯುಎಇ ಆರನೇ ಸ್ಥಾನದಲ್ಲಿದೆ ಎಂದು ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News