‘ದುಬೈ ರನ್’: ಗಾಲಿ ಕುರ್ಚಿಯಲ್ಲೇ ಪಾಲ್ಗೊಂಡ ಭಾರತದ ಹಿರಿಯ ಮಹಿಳೆಯರು

Update: 2019-11-09 17:43 GMT
ಪೋಟೊ: khaleejtimes

ದುಬೈ, ನ.9: ಫಿಟ್‌ನೆಸ್ ಚಾಲೆಂಜ್(ದೈಹಿಕ ಕ್ಷಮತೆಯ ಸವಾಲು)ನ ಅಂಗವಾಗಿ ಶುಕ್ರವಾರ ನಡೆದ ಆರಂಭಿಕ ‘ದುಬೈ ರನ್’ ಕಾರ್ಯಕ್ರಮದಲ್ಲಿ ಸುಮಾರು 70000 ಜನ ಉತ್ಸಾಹದಿಂದ ಪಾಲ್ಗೊಂಡಿದ್ದು ಭಾರತದ ಇಬ್ಬರು ಹಿರಿಯ ಮಹಿಳೆಯರು ಗಾಲಿ ಕುರ್ಚಿಯಲ್ಲೇ ಭಾಗವಹಿಸಿ ಓಟ ಪೂರೈಸಿ ಗಮನ ಸೆಳೆದಿದ್ದಾರೆ. ಭಾರತ ಮೂಲದ, ಈಗ ಶಾರ್ಜದಲ್ಲಿ ನೆಲೆಸಿರುವ 78 ವರ್ಷದ ಈಶ್ವರಿ ಅಮ್ಮ ಮತ್ತು 86 ವರ್ಷದ ಕುಸುಮ್ ಭಾರ್ಗವ 5 ಕಿ.ಮೀ ದೂರದ ಓಟವನ್ನು ಯಶಸ್ವಿಯಾಗಿ ಪೂರೈಸಿದರು. ಅಲ್ಲದೆ ಈ ಓಟದಲ್ಲಿ ಪಾಲ್ಗೊಂಡ ಅತ್ಯಂತ ಹಿರಿಯರು ಎಂಬ ದಾಖಲೆಗೂ ಪಾತ್ರರಾದರು.

ಇದೊಂದು ಅದ್ಭುತ ಅನುಭವವಾಗಿತ್ತು. ಹಲವರನ್ನು ಭೇಟಿಯಾಗುವ ಅವಕಾಶ ದೊರಕಿದೆ. ಹಲವರು ನನ್ನ ಬಳಿಗೆ ಬಂದು ಫೋಟೋ ತೆಗೆಸಿಕೊಂಡರು. 5 ಕಿ.ಮೀ ದೂರದ ಓಟವನ್ನು ಯಶಸ್ವಿಯಾಗಿ ಪೂರೈಸಿದ್ದು ಎಲ್ಲಾ ಶ್ರೇಯವೂ ನನ್ನ ಸೊಸೆಗೆ ಸಲ್ಲಬೇಕು ಎಂದು ಕುಸುಮ್ ಭಾರ್ಗವ್ ಪ್ರತಿಕ್ರಿಯಿಸಿದ್ದಾರೆ.

   ದುಬೈಯ ಶೇಖ್ ಝಾಯೆದ್ ರಸ್ತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯರು ಹಾಗೂ ಪ್ರವಾಸಿಗಳ ಸಹಿತ ಎಲ್ಲಾ ಸಮುದಾಯದವರು ಪಾಲ್ಗೊಂಡಿದ್ದು ದುಬೈಯ ಯುವರಾಜ ಮತ್ತು ದುಬೈಯ ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷ ಶೇಖ್ ಹಮ್ದನ್ ಬಿನ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ನೇತೃತ್ವದಲ್ಲಿ ಸುಮಾರು 70000 ಜನ ಉತ್ಸಾಹದಿಂದ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News