ಕನ್ನಡ ರಾಜ್ಯೋತ್ಸವದ ಅಂಗವಾಗಿ ಐ.ಎಸ್.ಎಫ್ ವತಿಯಿಂದ 'ಕರುನಾಡ ಸಂಭ್ರಮ-2019'

Update: 2019-11-18 06:03 GMT

ರಿಯಾದ್: ಇಂಡಿಯನ್ ಸೋಶಿಯಲ್ ಫೋರಂ, ಕರ್ನಾಟಕ ರಾಜ್ಯ ಸಮಿತಿ - ರಿಯಾದ್ ವತಿಯಿಂದ ಅನಿವಾಸಿ ಭಾರತೀಯರಿಗಾಗಿ 'ಕರುನಾಡ ಸಂಭ್ರಮ -2019' ಬೃಹತ್ ಕುಟುಂಬ ಸಮ್ಮಿಲನವು ತಾಕತ್ ವ್ಯೂ ರೆಸಾರ್ಟ್, ಆಲ್ -ಸುಲೈನಲ್ಲಿ  ಗುರುವಾರ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇಂಡಿಯನ್ ಫ್ರಟೆರ್ನಿಟಿ ಫೋರಂ ಸೌದಿ ಅರೇಬಿಯಾ ಝೋನಲ್ ಅಧ್ಯಕ್ಷ ಬಷೀರ್ ಎಂಗಾಪುಯಾ ಇಂಡಿಯನ್ ಸೋಶಿಯಲ್ ಫೋರಂ ಯಾವತ್ತೂ ಅನಿವಾಸಿ ಭಾರತೀಯರ ಆಶಾಕಿರಣವಾಗಿ ಕಾರ್ಯಾಚರಿಸುತ್ತಿದ್ದು, ಅನಿವಾಸಿಗಳ ಸಂಕಷ್ಟಗಳಿಗೆ ಪ್ರಪ್ರಥಮವಾಗಿ ಓಗೊಡುವ ಸಂಘಟನೆಯಾಗಿದ್ದು ಇನ್ನು ಮುಂದೆಯೂ ಸರ್ವಶಕ್ತನು ಅನುಗ್ರಹಿಸಲಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ಸಾಬಿತ್ ಹಸನ್ ವಹಿಸಿದ್ದರು.

ಕಾರ್ಯಕ್ರಮದ ದಿಕ್ಸೂಚಿ ಭಾಷಣ ಮಾಡಿದ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ  ಕನ್ನಡದ ಕಂಪನ್ನು ಅರೇಬಿಯಾದ ಮಣ್ಣಲ್ಲಿ ಪಸರಿಸಿ ಅನಿವಾಸಿ ಭಾರತೀಯರನ್ನು ಒಗ್ಗೂಡಿಸಿ, ಕರ್ನಾಟಕದ ಇತಿಹಾಸ ಮತ್ತು ಸಂಸ್ಕೃತಿಯ ಅನಾವರಣ ಇಂಡಿಯನ್ ಸೋಶಿಯಲ್ ಫೋರಂ ಹಮ್ಮಿಕೊಂಡ ಕರುನಾಡ ಸಂಭ್ರಮವು ಒಂದು ಅರ್ಥಪೂರ್ಣ ಕಾರ್ಯಕ್ರಮ ಎಂದು ಹೇಳಿದರು.

ಇಂಡಿಯನ್ ಫ್ರಟೆರ್ನಿಟಿ ಫೋರಂ, ರಿಯಾದ್ ಅಧ್ಯಕ್ಷ ಇಸ್ಮಾಯಿಲ್ ಯೂಸುಫ್  ಮಾತನಾಡಿ ಐ.ಎಸ್.ಎಫ್ ಸಲ್ಲಿಸುವ ಎಲ್ಲಾ ಸಮಾಜ ಸೇವೆಗಳನ್ನು ಬೆಂಬಲಿಸುವ ಭರವಸೆ ನೀಡಿದರು.

ಹಿದಾಯಾ ಫೌಂಡೇಶನ್ ರಿಯಾದ್ ಅಧ್ಯಕ್ಷ ಯೂಸುಫ್ ವಾಲನ್  ಸಮಾಜಸೇವಾ ಕಾರ್ಯಗಳಲ್ಲಿ ಎಲ್ಲಾ ಅನಿವಾಸಿ ಸಂಘಟನೆಗಳು ಒಗ್ಗೂಡಬೇಕೆಂದು  ಒತ್ತಾಯಿಸಿದರು ಮತ್ತು ಎಸ್‌.ಡಿ.ಪಿ.ಐ ಪಕ್ಷದ ಹೋರಾಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಭಾರತದಲ್ಲಿ ಕೋಮುವಾದವು ನಶಿಸಲಿದೆ ಈ ನಿಟ್ಟಿನಲ್ಲಿ ಎಸ್.ಡಿ.ಪಿ.ಐ. ನಡೆಸುವ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದರು.

ಇಂಡಿಯನ್ ಸೋಶಿಯಲ್ ಫೋರಂ, ಕೇಂದ್ರ ಸಮಿತಿಯ ಬಶೀರ್ ಕಾರಂದೂರು, ಇಂಡಿಯನ್ ಸೋಶಿಯಲ್ ಫೋರಂ, ಕರ್ನಾಟಕ ರಾಜ್ಯ ಸಮಿತಿ ಪೂರ್ವ ಪ್ರಾಂತ್ಯ ಇದರ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇರ್ಷಾದ್, ಸಾಮಾಜಿಕ ಕಾರ್ಯಕರ್ತರಾದ ಹನೀಫ್ ಬಸ್ರೂರ್ ಈ ಸಂದರ್ಭದಲ್ಲಿ ಮಾತನಾಡಿದರು.

ಮಲ್ನಾಡ್ ಗಲ್ಫ್ ಅಸೋಸಿಯೇಷನ್ ಅಧ್ಯಕ್ಷ ಜುನೈದ್, ಕಾಟಿಪಲ್ಲ ಮುಸ್ಲಿಂ ಯೂತ್ ಅಶೋಶಿಯೇಷನ್ ಅಧ್ಯಕ್ಷ ಸುಲೈಮಾನ್ ಕಾಟಿಪಲ್ಲ, ಸಮಾಜ ಸೇವಕರಾದ ಮುಸ್ತಾಕ್ ಕಾಸಿಮಿ, ಡಿಕೆಎಂಒ ರಿಯಾದ್ ಉಪಾಧ್ಯಕ್ಷ ಫಜ್ರುಲ್ರಹ್ಮಾನ್ ಕೋಲ್ಕರ್, ಖಿದ್ಮಾ ಫೌಂಡೇಶನ್ ರಿಯಾದ್ ಅಧ್ಯಕ್ಷ ಅಬ್ದುಲ್ ಸಲಾಮ್ ಮೌಲಾನಾ, ಮಂಗಳೂರು ಕ್ರಿಕೆಟ್ ಅಶೋಶಿಯೇಷನ್ ಅಧ್ಯಕ್ಷ ಶಂಸುದ್ದೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮಗಳಾದ ಹಾಡುಗಾರಿಕೆ, ಸಾಂಪ್ರದಾಯಿಕ ದಫ್, ನಾಟಕ ಕೂಡ ಕಾರ್ಯಕ್ರಮದ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಪುರುಷರು, ಮಕ್ಕಳಿಗಾಗಿ ಕ್ರಿಕೆಟ್, ಹಗ್ಗಜಗ್ಗಾಟ ದಂತಹ ವಿವಿಧ ಕ್ರೀಡೆಗಳನ್ನು ನಡೆಸಲಾಯಿತು ಮತ್ತು ಮಹಿಳೆಯರಿಗಾಗಿ ವಿಶೇಷ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಮೊದಲಿಗೆ ಇಂಡಿಯನ್ ಸೋಶಿಯಲ್ ಫೋರಂ, ಕರ್ನಾಟಕ ರಾಜ್ಯ ಸಮಿತಿ ರಿಯಾದ್ ಇದರ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಶರೀಫ್ ಸ್ವಾಗತಿಸಿದರೆ, ಮೊಹಮ್ಮದ್ ಸಿರಾಜ್ ವಂದಿಸಿದರು. ತಾಜುದ್ದೀನ್ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News