ಕೆಸಿಎಫ್ ಶಾರ್ಜಾ ಝೋನ್ ವತಿಯಿಂದ ಮೀಲಾದ್ ಸಂಗಮ

Update: 2019-12-01 11:39 GMT

ಶಾರ್ಜಾ: ಅಂತ್ಯದಿನದವರೆಗೆ ಈ ಭೂಮಿಯಲ್ಲಿ ಹುಟ್ಟಿ ಬಾಳುವ ಸರ್ವ ಮುಸ್ಲಿಂ ಉಮ್ಮತ್ತಿಗಳ ಮೇಲೆ ಪ್ರವಾದಿ(ಸ.ಅ) ಇಟ್ಟಿದ್ದ ಪ್ರೀತಿ, ವಾತ್ಸಲ್ಯ ವಿವರಣೆಗೆ ನಿಲುಕದಾಗಿದ್ದು, ಸ್ವಹಾಬಿಗಳು ತಮ್ಮ ನಾಯಕನನ್ನು ನಡೆಸಿಕೊಂಡಿದ್ದ ರೀತಿ ಅನನ್ಯ ಎಂದು ಖ್ಯಾತ ವಾಗ್ಮಿ ಅಲ್ ಹಾಫಿಲ್ ಮಸೂದ್ ಸಖಾಫಿ ಗೂಡಲ್ಲೂರು ಹೇಳಿದ್ದಾರೆ.

"ಹಬೀಬ್(ಸ.ಅ) ನಮ್ಮ ಜೊತೆಗಿರಲಿ’’ ಎಂಬ ಘೋಷವಾಕ್ಯದೊಂದಿಗೆ ಕೆಸಿಎಫ್ ಶಾರ್ಜಾ ಝೋನ್ ವತಿಯಿಂದ ಇಲ್ಲಿನ ಅಲ್‌ ಖಾಸಿಮಿಯಾದ ರಯಾನ್ ಹೊಟೇಲ್‌ನಲ್ಲಿ ಇತ್ತೀಚೆಗೆ ನಡೆದ ಮೀಲಾದ್ ಸಂಗಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

 ಪ್ರವಾದಿಯವರು ನಮ್ಮ ಮೇಲೆ ಹೊಂದಿದ್ದ ಪ್ರೀತಿಗೆ ಪ್ರತಿಯಾಗಿ ಪೂರ್ಣ ಪ್ರಮಾಣದಲ್ಲಿ ಕೃತಜ್ಞತೆ ಸಲ್ಲಿಸಲು ನಮ್ಮಿಂದ ಸಾಧ್ಯವಾಗದಿದ್ದರೂ ಅವರನ್ನು ನಮ್ಮ ಜೀವನದ ಪ್ರತಿಯೊಂದು ಗಳಿಗೆಯಲ್ಲೂ ನೆನಪಿಸಿಕೊಂಡು, ಜೀವನದ ಪ್ರತಿ ಹೊಸ್ತಿಲಿನಲ್ಲಿಯೂ ಮಾದರಿಯನ್ನಾಗಿಸುವ ಮಹತ್ತರ ಜವಾಬ್ದಾರಿ ಪ್ರತಿಯೊಬ್ಬ ಮುಸ್ಲಿಮರ ಹೆಗಲ ಮೇಲಿದೆ ಎಂದು ಅವರು ಹೇಳಿದರು.

ಕೆಸಿಎಫ್ ಶಾರ್ಜಾ ಝೋನ್ ಅಧ್ಯಕ್ಷ ಅಬೂಸ್ವಾಲಿಹ್ ಸಖಾಫಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ ಉದ್ಘಾಟಿಸಿದರು.

ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿಯ ಆಡಳಿತ ವಿಭಾಗದ ಅಧ್ಯಕ್ಷ ಡಾ.ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಅಲ್‌ಕಾಮಿಲ್ ಸಖಾಫಿ, ಶಿಕ್ಷಣ ವಿಭಾಗದ ಅಧ್ಯಕ್ಷ ಎಸ್.ಪಿ.ಹಂಝ ಸಖಾಫಿ, ಪ್ರಧಾನ ಕಾರ್ಯದರ್ಶಿ ಕಮರುದ್ದೀನ್ ಗೂಡಿನಬಳಿ ಹಣಕಾಸು ವಿಭಾಗದ ನಿಯಂತ್ರಕ ಹಮೀದ್ ಸಅದಿ ಈಶ್ವರಮಂಗಳ, ಇಹ್ಸಾನ್ ವಿಭಾಗದ ಕಾರ್ಯದರ್ಶಿ ರಹೀಂ ಸಅದಿ ಪಾಣೆಮಂಗಳೂರು ಸೇರಿದಂತೆ ಹಲವು ನಾಯಕರು ಮಾತನಾಡಿ ಶುಭಹಾರೈಸಿದರು.

ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಶಾಫಿ ಸಅದಿ ಬೆಂಗಳೂರು, ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಡಾ.ಶೇಖ್ ಬಾವಾ ಹಾಜಿ ಉಪಸ್ಥಿತರಿದ್ದರು.

ಕೆಸಿಎಫ್ ಯುಎಇ ರಾಷ್ಟ್ರೀಯ ಶಿಕ್ಷಣ ವಿಭಾಗದ ಅಧ್ಯಕ್ಷ ಇಬ್ರಾಹೀಂ ಸಖಾಫಿ ದುಆ ನೆರವೇರಿಸಿದರು. ಝೋನ್ ವತಿಯಿಂದ ಮೌಲೂದ್ ಪಾರಾಯಣ ಹಾಗೂ ಬುರ್ದಾ ಆಲಾಪನೆ ನಡೆಯಿತು. ನಿಝಾಮುದ್ದೀನ್ ಸಖಾಫಿ ಕಿರಾಅತ್ ಪಠಿಸಿದರು. ಕೆಸಿಎಫ್ ಮೀಲಾದ್ ಸ್ವಾಗತ ಸಮಿತಿಯ ಅಧ್ಯಕ್ಷ ಯು.ಟಿ.ನೌಶಾದ್ ಸ್ವಾಗತ ಭಾಷಣ ಮಾಡಿದರು. ಕೆಸಿಎಫ್ ಶಾರ್ಜಾ ಝೋನ್ ವತಿಯಂದ ನಡೆದ ದಫ್ ಪ್ರದರ್ಶನ ಸಭಿಕರ ಗಮನ ಸೆಳೆಯಿತು.

ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿಯ ಪ್ರಕಾಶನ ವಿಭಾಗದ ಅಧ್ಯಕ್ಷ ಅಬ್ದುಲ್ ಹಮೀದ್ ಬಜ್ಪೆ, ಸಂಚಾಲಕ ನಝೀರ್ ಕಾಶಿಪಟ್ನ, ಶಿಕ್ಷಣ ವಿಭಾಗದ ಕಾರ್ಯದರ್ಶಿ ಉಮರ್ ಸಖಾಫಿ ಮಿತ್ತೂರು, ಸಂಘಟನಾ ಕಾರ್ಯದರ್ಶಿ ಹುಸೈನ್ ಎಮ್ಮೆಮಾಡು, ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೂಸಾ ಹಾಜಿ ಬಸರಾ, ಸಂಘಟನಾ ವಿಭಾಗದ ಅಧ್ಯಕ್ಷ ಇಕ್ಬಾಲ್ ಕಾಜೂರು,ಕೋಶಾಧಿಕಾರಿ ಇಬ್ರಾಹೀಂ ಬ್ರೈಟ್, ಪ್ರಕಾಶನ ವಿಭಾಗದ ಅಧ್ಯಕ್ಷ ಅಬ್ದುಲ್ ಕರೀಂ ಮುಸ್ಲಿಯಾರ್, ಕಾರ್ಯದರ್ಶಿ ಹಕೀಂ ತುರ್ಕಳಿಕೆ ಇಹ್ಸಾನ್ ಕಾರ್ಯದರ್ಶಿ ಅಬ್ದುಲ್ ಖಾದರ್ ಸಅದಿ ಸುಳ್ಯ, ಸಾಂತ್ವಾನ ವಿಭಾಗದ ಅಧ್ಯಕ್ಷ ಝೈನುದ್ದೀನ್ ಹಾಜಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಮೀಲಾದ್ ಸ್ವಾಗತ ಸಮಿತಿ ಕನ್ವೀನರ್ ಹುಸೈನ್ ಇನೋಳಿ ವಂದಿಸಿದರು. ಸಿರಾಜ್ ಅರಿಯಡ್ಕ ಹಾಗೂ ನಾಝಿಮ್ ಮುಈನಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News