ಯುಎಇ : ಡಿಕೆಎಸ್ ಸಿ 20ನೇ ವಾರ್ಷಿಕ ಸಮ್ಮೇಳನ, ಮೀಲಾದ್ ಆಚರಣೆ

Update: 2019-11-24 16:07 GMT

ದುಬೈ : ಡಿ.ಕೆ.ಎಸ್.ಸಿ ತನ್ನ 20 ವರ್ಷವನ್ನು ಯುಎಇಯಲ್ಲಿ ಪೂರ್ತಿಗೊಳಿಸಿದ ಪ್ರಯುಕ್ತ ಇದರ 20ನೇ ವಾರ್ಷಿಕ ಸಮ್ಮೇಳನ ಹಾಗೂ ಮೀಲಾದ್ ಆಚರಣೆಯು ದುಬೈಯ ಪರ್ಲ್ ಸಿಟಿ ಸೂಟ್ ಹೋಟೆಲ್ ನ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಈ ಸಂದರ್ಭ ಮೌಲಿದ್ ಮಜ್ಲಿಸ್ ನೇತೃತ್ವವನ್ನು ಡಿ.ಕೆ.ಎಸ್.ಸಿ ಸಲಹೆಗಾರ ಇಬ್ರಾಹಿಂ ಸಖಾಫಿ ಕೆದಂಬಾಡಿ ಮತ್ತು ಅಬ್ದುಲ್ ಅಝೀಝ್ ಲತೀಫಿ ಅವರು ವಹಿಸಿದ್ದರು. ಆಸಿಫ್ ನೇತೃತ್ವದಲ್ಲಿ ಬುರ್ದಾಬೈತ್,  ಸಮದ್ ಬಿರಾಲಿ ನೇತೃತ್ವದಲ್ಲಿ ಅಲ್ ಕಮರ್ ಎಸೋಸಿಯೇಷನ್ ದುಬೈ ತಂಡದಿಂದ ದಫ್ ಕಾರ್ಯಕ್ರಮ ನಡೆಯಿತು.

20ನೇ ವಾರ್ಷಿಕ ಸಮ್ಮೇಳನದ ಚೆಯರ್ಮ್ಯಾನ್‌ ಶುಕೂರ್ ಮನಿಲ ನೇತೃತ್ವದಲ್ಲಿ ನಡೆದ ಸಭಾ ಕಾರ್ಯಕ್ರಮಕ್ಕೆ  ಡಿ.ಕೆ.ಎಸ್.ಸಿ ಯುಎಇ ಇದರ ಗೌರವಾಧ್ಯಕ್ಷ ಸೈಯದ್ ತ್ವಾಹ ಬಾಫಕಿ  ತಂಙಳ್ ಚಾಲನೆ ನೀಡಿದರು. ಪ್ರಧಾನ ಕಾರ್ಯದರ್ಶಿ ಹಾಜಿ ನವಾಝ್ ಕೋಟೆಕಾರ್, ಉಪಾಧ್ಯಕ್ಷ ಯೂಸುಫ್ ಆರ್ಲಪದವು ಸ್ವಾಗತಿಸಿದರು.

ಡಿ.ಕೆ.ಎಸ್.ಸಿ ಯುಎಇ  ನ್ಯಾಷನಲ್  ಕಮಿಟಿಯ ಅಧ್ಯಕ್ಷ ಹಾಜಿ ಇಕ್ಬಾಲ್ ಕನ್ನಂಗಾರ್ ಉದ್ಘಾಟನಾ ಭಾಷಣದಲ್ಲಿ  ಡಿ.ಕೆ.ಎಸ್.ಸಿ  ಯ ಬೆಳವಣಿಗೆ ಹಾಗೂ ಕಾರ್ಯಚಟುವಟಿಕೆಯನ್ನು ವಿವರಿಸಿದರು. ಡಿ.ಕೆ.ಎಸ್.ಸಿ ಉಪಾಧ್ಯಕ್ಷ ಹಾಗೂ ಬಿಲ್ಡಿಂಗ್ ಕಮಿಟಿ ಚೆಯರ್ಮ್ಯಾನ್‌  ಎಂ ಇ ಮೂಳೂರು ಮಾತನಾಡಿದರು.

ಈ ಸಂದರ್ಭ ಸೌದಿ ಅರೇಬಿಯಾದಿಂದ ಆಗಮಿಸಿದ ಡಿ.ಕೆ.ಎಸ್.ಸಿ ಸೆಂಟ್ರಲ್‌ ಕಮಿಟಿಯ ವರ್ಕಿಂಗ್ ಪ್ರೆಸಿಡೆಂಟ್ ಹಾತಿಮ್ ಕಂಚಿ, ಕಮ್ಯೂನಿಕೇಶನ್ ಸೆಕ್ರೆಟರಿ ಹಾತಿಮ್ ಕೂಳೂರು, ಜೊತೆ ಕಾರ್ಯದರ್ಶಿ ಅಬೂಬಕರ್ ಬರ್ವ, ದಮಾಮ್ ಝೊನ್ ಪ್ರೆಸಿಡೆಂಟ್  ಹಸನ್ ಬಾವ ಕುಪ್ಪೆಪದವು, ಸೆಂಟ್ರಲ್‌ ಕಮಿಟಿ ಸದಸ್ಯ ಉಸ್ಮಾನ್ ಅರಾಮೆಕ್ಸ್, ಅಬೂಬಕರ್ ಅಜಿಲಮೊಗರು, ಸಿಲ್ವರ್ ಜುಬಿಲಿ ಜನರಲ್ ಕನ್ವೀನರ್ ಶೇಕ್ ಬಲ್ಕುಂಜೆ, ಬಹರೈನ್ .ಡಿ.ಕೆ.ಎಸ್.ಸಿ  ಗೌರವಾಧ್ಯಕ್ಷ ಸೀದಿ ಹಾಜಿ ಹಾಗೂ ಪ್ರಧಾನ ಕಾರ್ಯದರ್ಶಿ  ನೌಶಾದ್ ಉಳ್ಳಾಲ ಮೊದಲಾದ ಉಪಸ್ಥಿತರಿದ್ದರು.

ಡಿ.ಕೆ.ಎಸ್.ಸಿ ಯುಎಇ ಕಳೆದ ವರ್ಷದ ಅತ್ಯುತ್ತಮ ಸೇವೆಗಾಗಿ ನೀಡಲಾದ ಪಾರಿತೋಷಕವನ್ನು  ಅಧ್ಯಕ್ಷ ಹಾಜಿ ಇಕ್ಬಾಲ್ ಕನ್ನಂಗಾರ್ ಹಾಗೂ ಖಜಾಂಜಿ ಇಬ್ರಾಹಿಂ ಹಾಜಿ ಕಿನ್ಯ, ಉಪಾಧ್ಯಕ್ಷ ಯೂಸುಫ್ ಆರ್ಲಪದವು ಸ್ವೀಕರಿಸಿದರು.

ಸೆಂಟ್ರಲ್ ಕಮಿಟಿ ವತಿಯಿಂದ ವರ್ಷಂಪ್ರತಿ ಕೊಡಲ್ಪಡುವ ಪ್ರತಿಷ್ಠಿತ ಕುಂಬೋಳ್ ತಂಙಳ್ ಪ್ರಶಸ್ತಿಯನ್ನು ರಾಷ್ಟ್ರೀಯ ಸಮಿತಿ ಸದಸ್ಯ ಅಬ್ಬು ಹಾಜಿ ಕಿನ್ಯ ಅವರಿಗೆ ಪ್ರದಾನ ಮಾಡಲಾಯಿತು.

ಡಿ.ಕೆ.ಎಸ್.ಸಿ ಸೆಂಟ್ರಲ್‌ ಕಮಿಟಿಯು ಸೌದಿ ಅರೇಬಿಯಾದಲ್ಲಿ 25ನೇ ವರ್ಷ ಆಚರಿಸುತ್ತಿದ್ದು ಇದರ ಸಿಲ್ವರ್ ಜುಬಿಲಿ ಲೋಗೊ ಹಾಗೂ ಡಿ.ಕೆ.ಎಸ್.ಸಿ:2020 ನೇ ವರ್ಷದ ಕ್ಯಾಲೆಂಡರನ್ನು ಇದೇ ಸಂದರ್ಭ ಬಿಡುಗಡೆ ಗೊಳಿಸಲಾಯಿತು. ಡಿ ಕೆ ಎಸ್‌ ಸಿ ಮರ್ಕಸ್ ಸಮಿತಿ ಕಾರ್ಯಾಧ್ಯಕ್ಷ ಅಸ್ಸಯ್ಯದ್ ಕೆಎಸ್ ಮುಕ್ತಾರ್ ತಂಙಳ್ ಕುಂಬೋಳ್  ಉಪನ್ಯಾಸ ನೀಡಿದರು.

ಈ ಸಂದರ್ಭ ಹಾಜಿ ಮೊಯ್ದಿನ್ ಕುಟ್ಟಿ ದಿಬ್ಬ, ಅಬೂಬಕರ್ ಮದನಿ ಹೋರ್ಲಂಝ್, ಕೆಸಿಎಫ್ ನೋರ್ತ್ ಝೋನ್ ನ ಇಸ್ಮಾಯಿಲ್ ಮದನಿನಗರ, ಸೌತ್  ಝೋನ್ ಅಧ್ಯಕ್ಷ ಅಬ್ದುಲ್ ಅಹ್ಸನಿ ಉಸ್ತಾದ್, ದಾರುನ್ನೂರ್ ಅಧ್ಯಕ್ಷ ಶಂಸುದ್ದೀನ್ ಸುರಲ್ಪಾಡಿ ಮತ್ತು ಕಾರ್ಯದರ್ಶಿ ಬದುರುದ್ದೀನ್ ಹೆಂತಾರ್, ಉದ್ಯಮಿಗಳಾದ ಅನ್ವರ್ ತುಂಬೆ, ಇರ್ಫಾನ್ ಮಂಜೇಶ್ವರ, ಇಬ್ರಾಹಿಂ ಬ್ರೈಟ್ ಮಾರ್ಬಲ್, ಹಮೀದ್ ತುರ್ಕಲಿಕೆ, ಹನೀಫ್ ಕೊಡಗು,  ಡಿ.ಕೆ.ಎಸ್.ಸಿ ನೇತಾರರಾದ ಅಬ್ದುಲ್ ಲತಿಫ್ ಮುಲ್ಕಿ, ಅಮಾನಿ ಅಜ್ಹಾವರ, ಝೈನುದ್ದೀನ್ ಬೆಲ್ಲಾರೆ, ಹಾಜಿ ಅಬ್ದುಲಾ ಬೀಜಾಡಿ, ಅಬ್ದುಲ್ ರಹಿಮಾನ್ ಸಜಿಪ, ಅಬ್ದುಲ್ಲಾ ಪೆರುವಾಯಿ, ಮುಹಮ್ಮದ್ ಅಲೀ ಮೂಡುತೊಟ , ಹಸನ್ ಬಾವ ಹಳೆಯಂಗಡಿ, ಇಕ್ಬಾಲ್ ಕುಂದಾಪುರ, ಉಮ್ಮರ್ ಈಶ್ವರಮಂಗಳ, ಅಶ್ರಫ್ ಲತೀಫಿ ಉಸ್ತಾದ್, ಅಬ್ದುಲ್ ಖಾದರ್ ಮದಾಮ್, ಪರ್ವೀಝ್ ಗೂಡಿನಬಲಿ, ರಜಬ್ ಉಚ್ಚಿಲ, ಶುಕೂರ್ ಜೋಕಟ್ಟೆ, ನಝೀರ್ ಕನ್ನಂಗಾರ್, ಅಕ್ಬರ್ ಅಲೀ ಸುರತ್ಕಲ್, ಅಶ್ರಫ್ ಸತ್ತಿಕಲ್, ಅಬ್ಬಾಸ್ ಪಾನಾಜೆ, ಅಬ್ದುಲ್ ಹಮೀದ್ ಸುಳ್ಯ, ಅಶ್ರಫ್ ಜದ್ದಾಫ್, ಕಮರುದ್ದೀನ್ ಗುರುಪುರ, ಡಿ ಕೆ ಎಸ್ ಸಿ ಯ ಪದಾಧಿಕಾರಿಗಳು ಹಾಗು ಇತರರು ಉಪಸ್ಥಿತರಿದ್ದರು.

ಯೂಸುಫ್ ಆರ್ಲಪದವು, ಶರೀಫ್ ಬೊಲ್ಮಾರ್, ಸಮೀರ್ ಕೊಲ್ನಾಡ್, ಶರೀಫ್ ಆರ್ಲಪದವು, ಯೂತ್ ಟೀಮ್ ಅಧ್ಯಕ್ಷ ಸಮದ್ ಬೀರಾಳಿ ಕಾರ್ಯಕ್ರಮ ನಡೆಸಿಕೊಟ್ಟರು. ಇಬ್ರಾಹಿಂ ಕಳತ್ತೂರು ವಂದಿಸಿದರು.

Writer - ಕಮರುದ್ದೀನ್ ಗುರುಪುರ

contributor

Editor - ಕಮರುದ್ದೀನ್ ಗುರುಪುರ

contributor

Similar News