ಕೆಸಿಎಫ್ ಒಮಾನ್ ವತಿಯಿಂದ ಮೀಲಾದ್ ಕಾನ್ಫರೆನ್ಸ್

Update: 2019-11-24 17:56 GMT

ಒಮಾನ್, ನ.24: ಕರ್ನಾಟಕ ಕಲ್ಚರಲ್ ಫೌಂಡೇಶನ್ ಒಮಾನ್ ಇದರ ವತಿಯಿಂದ ಪ್ರವಾದಿ ಮುಹಮ್ಮದ್ (ಸ.ಅ) ರವರ ಜನ್ಮ ದಿನಾಚರಣೆಯ ಪ್ರಯುಕ್ತ ಮೀಲಾದ್ ಕಾನ್ಫರೆನ್ಸ್ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಇತ್ತೀಚೆಗೆ ಅಲ್ ಮಾಸಾ ಹಾಲ್ ಮಸ್ಕತ್ ನ ರುವಿಯಲ್ಲಿ ನಡೆಯಿತು.

ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಅಯ್ಯೂಬ್ ಕೋಡಿ ಅಧ್ಯಕ್ಷತೆ ವಹಿಸಿದ್ದರು. ಸಯ್ಯಿದ್ ಮುಹಮ್ಮದ್ ಇಲ್ಯಾಸ್ ಹುಸೈನ್ ಅಹ್ಸನಿ ಜೀಲಾನಿ, ಲಕ್ಷದ್ವೀಪ ಅವರು ಪ್ರಾರ್ಥಿಸಿದರು. ಉದ್ಘಾಟನೆಯನ್ನು ಎಸ್ ವೈಸ್ ದಾವಣಗೆರೆ ಅಧ್ಯಕ್ಷ ಇಬ್ರಾಹಿಂ ಸಖಾಫಿ ನೆರವೇರಿಸಿದರು. ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಹಾಫಿಳ್ ಸುಫಿಯಾನ್ ಸಖಾಫಿ ಮುಖ್ಯ ಪ್ರಭಾಷಣ ಮಾಡಿದರು. ಬಳಿಕ ಅವರನ್ನು ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.

ನಂತರ ಖಾರಿ ಮುಹಮ್ಮದ್‌ ರಿಯಾಝುದ್ದೀನ್ ಅಶ್ರಫಿ, ಮುಂಬಯಿ ಅವರು ನಅತೇ ಶರೀಫ್ ನಡೆಸಿಕೊಟ್ಟರು. ಅಬ್ದುಲ್ ರಹಮಾನ್ ಮೊಗರ್ಪಣೆ ಸುಳ್ಯ, ಶಾಹಿದ್ ರಝಾ ಮಿಸ್ಬಾಹಿ, ಐಸಿಎಫ್ ಒಮಾನ್ ಅಧ್ಯಕ್ಷ ಶಫೀಕ್ ಬುಖಾರಿ, ಇಬ್ರಾಹಿಂ ಹಾಜಿ ಅತ್ರಾಡಿ, ಆರಿಫ್ ಕೋಡಿ, ಹಂಝ ಹಾಜಿ ಕನ್ನಂಗಾರ್, ಖಾಸಿಂ ಹಾಜಿ ನಿಝ್ವ, ಶಮೀರ್ ಉಸ್ತಾದ್ ಹೂಡೆ, ಹನೀಫ್ ಸಅದಿ, ಝುಬೈರ್ ಸಅದಿ, ನಿಝಾರ್ ಝುಹ್ರಿ, ಸಲೀಮ್ ಮಿಸ್ಬಾಹಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ವಿವಿಧ ಝೋನ್ ಅಧ್ಯಕ್ಷರಾದ ಅಹಮದ್ ಸ್ವಾದಿಕ್ ಕಾಟಿಪಳ್ಳ, ಜಸೀಮ್, ಹನೀಫ್ ಮನ್ನಾಫ್, ಅಬ್ಬಾಸ್ ಮರಕಡ ಸುಳ್ಯ, ಬಾಷ ತೀರ್ಥಹಳ್ಳಿ ಅವರು  ಝೋನ್ ವತಿಯಿಂದ ನಡೆಸಿದ ವಿವಿಧ ಕಾರ್ಯಕ್ರಮದ ಬಗೆಯಾಗಿ ಪ್ರಶಸ್ತಿ ಪತ್ರ ಪಡೆದುಕೊಂಡರು. ನಂತರ ಕೆಸಿಎಫ್ ಒಮಾನ್ ಹೊರತಂದ ಕ್ಯಾಲೆಂಡರ್ 2020 ಅನ್ನು ಬಿಡುಗಡೆ ಮಾಡಲಾಯಿತು. ಕೆಸಿಎಫ್ ಒಮಾನ್ 2019 ರ ಅತ್ಯುತ್ತಮ ರಾಷ್ಟ್ರೀಯ ಸಮಿತಿಯ ಸದಸ್ಯರಾಗಿ ಅಶ್ರಫ್ ಭಾರತ್ ಸುಳ್ಯ ಆಯ್ಕೆಯಾದರು.

ಸಯ್ಯಿದ್ ಸೈಫುದ್ದೀನ್ ಅಲ್ ಹೈದ್ರೋಸಿ ತಂಙಳ್ ಕೊಡಗು, ಇಕ್ಬಾಲ್ ಮದನಿ ಬೆಳ್ಳಾರೆ ಮತ್ತು ಅಹಮದ್ ಸಾದಿಕ್ ಕಾಟಿಪಳ್ಳ ಅವರು ಮೌಲಿದ್ ಹಾಗೂ ಬುರ್ದಾ ಮಜ್ಲಿಸ್ ನಡೆಸಿಕೊಟ್ಟರು.

ಕೆಸಿಎಫ್ ಒಮಾನ್ ಪ್ರಧಾನ ಕಾರ್ಯದರ್ಶಿ ಸ್ವಾದಿಕ್ ಹಾಜಿ ಸುಳ್ಯ, ಕೆಸಿಎಫ್ ಒಮಾನ್ ಕೈಗೊಂಡ ಕಾರ್ಯಕ್ರಮಗಳನ್ನು ವಿವರಿಸಿದರು. ಮೀಲಾದ್ ಸ್ವಾಗತ ಸಮಿತಿ ಕನ್ವೀನರ್ ಸಯ್ಯಿದ್ ಆಬಿದ್ ಅಲ್ ಹೈದ್ರೋಸಿ ಸ್ವಾಗತಿಸಿ, ಕೆಸಿಎಫ್ ಒಮಾನ್ ಎಜುಕೇಶನ್ ಚೆಯರ್ಮೆನ್ ಉಬೈದುಲ್ಲಾ ಸಖಾಫಿ ವಂದಿಸಿದರು. ಕಲಂದರ್ ಬಾವ ಪರಪ್ಪು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News