ಸೌದಿ: ಮತ್ತೆ ಶೈಕ್ಷಣಿಕ ವ್ಯಕ್ತಿಗಳು, ಸಾಹಿತಿಗಳು ಹೋರಾಟಗಾರರ ಬಂಧನ

Update: 2019-11-26 14:25 GMT

ಸೌದಿ, ನ. 26: ಕಳೆದ ಎರಡು ವರ್ಷಗಳಿಂದ ನಡೆಸುತ್ತಿರುವ ಬಂಧನ ಸತ್ರವನ್ನು ಮುಂದುವರಿಸಿರುವ ಸೌದಿ ಅರೇಬಿಯ, ಶೈಕ್ಷಣಿಕ ವ್ಯಕ್ತಿಗಳು ಮತ್ತು ಸಾಹಿತಿಗಳು ಸೇರಿದಂತೆ ಕನಿಷ್ಠ ಒಂಬತ್ತು ಮಂದಿಯನ್ನು ಬಂಧಿಸಿದೆ ಎಂದು ಹೋರಾಟಗಾರರು ಸೋಮವಾರ ಹೇಳಿದ್ದಾರೆ.

ನವೆಂಬರ್ 16ರಂದು ಆರಂಭಗೊಂಡ ಇತ್ತೀಚಿನ ಬಂಧನ ಕಾರ್ಯಾಚರಣೆಯಲ್ಲಿ ಪತ್ರಕರ್ತರು, ಬ್ಲಾಗರ್‌ಗಳು ಮತ್ತು ಮಾನವಹಕ್ಕುಗಳ ಹೋರಾಟಗಾರರು ಸೇರಿದ್ದಾರೆ ಎಂದು ಮಾನವಹಕ್ಕುಗಳ ಗುಂಪು ಎಎಲ್‌ಕ್ಯೂಎಸ್‌ಟಿ ತಿಳಿಸಿದೆ.

‘‘ಇತ್ತೀಚಿನ ದಿನಗಳಲ್ಲಿ ಸೌದಿ ಅಧಿಕಾರಿಗಳು ಹೊಸದಾಗಿ ಪತ್ರಕರ್ತರು, ಸಾಹಿತಿಗಳು ಮತ್ತು ಹೋರಾಟಗಾರರನ್ನು ಬಂಧಿಸುತ್ತಿದ್ದಾರೆ. ಬಂಧಿತರಲ್ಲಿ ಪುರುಷರು ಮತ್ತು ಮಹಿಳೆಯರು ಸೇರಿದ್ದಾರೆ’’ ಎಂದು ಅದು ಹೇಳಿಕೆಯೊಂದರಲ್ಲಿ ತಿಳಿಸಿದೆ.

‘‘ಅವರು ಆತ್ಮಸಾಕ್ಷಿಯ ಕೈದಿಗಳಿಗೆ ನೀಡುತ್ತಿರುವ ಹಿಂಸೆ, ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯವನ್ನೂ ಹೆಚ್ಚಿಸಿದ್ದಾರೆ’’ ಎಂದು ಎಎಲ್‌ಕ್ಯೂಎಸ್‌ಟಿ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News