×
Ad

ಕೆಸಿಎಫ್ ಸೊಹಾರ್ ಝೋನ್: ನ.28ರಂದು ಮೀಲಾದ್ ಜಲ್ಸ ಮತ್ತು ಇಹ್ಸಾನ್ ಫೂಟ್ ಪ್ರಿಂಟ್ 2019

Update: 2019-11-27 22:22 IST

ಒಮಾನ್, ನ.27: ಕೆಸಿಎಫ್ ಒಮಾನ್ ಸೊಹಾರ್ ಝೋನ್ ವತಿಯಿಂದ ನವೆಂಬರ್ 28 ರಂದು ಗುರುವಾರ ರಾತ್ರಿ 8 ಗಂಟೆಗೆ ಅಲ್ ಮನಮ್ ಸೊಹಾರ್ ಹೊಟೆಲ್ ಫಲಜ್ ನಲ್ಲಿ 'ಹಬೀಬ್ (ಸ.ಅ.) ನಮ್ಮ ಜತೆಗಿರಲಿ' ಎಂಬ ಘೋಷ ವಾಕ್ಯದೊಂದಿಗೆ ಮೀಲಾದ್ ಜಲ್ಸ ಮತ್ತು ಇಹ್ಸಾನ್ ಫೂಟ್ ಪ್ರಿಂಟ್- 2019 ನಡೆಯಲಿದೆ.

ಕೆಸಿಎಫ್ ಸೊಹಾರ್ ಝೋನ್ ಅಧ್ಯಕ್ಷ ಸಾದಿಕ್ ಕಾಟಿಪಳ್ಳ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದ ಉದ್ಘಾಟನೆಯನ್ನು ಕೆಸಿಎಫ್ ಒಮಾನ್ ಸಂಘಟನಾಧ್ಯಕ್ಷ ಸಯ್ಯಿದ್ ಆಬಿದ್ ಅಲ್ ಹೈದ್ರೋಸಿ ನೆರವೇರಿಸಲಿದ್ದಾರೆ. ಎಸ್ಎಸ್ಎಫ್ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಹಾಫಿಝ್ ಎಚ್.ಐ.ಸುಫಿಯಾನ್ ಸಖಾಫಿ ಕಾವಲಕಟ್ಟೆ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ಇಕ್ಬಾಲ್ ಮದನಿ ಬೆಳ್ಳಾರೆ ಮತ್ತು ಕೆಸಿಎಫ್ ಸೊಹಾರ್ ಝೋನ್ ಕಾರ್ಯಕರ್ತರಿಂದ ಬುರ್ಧಾ ಮಜ್ಲಿಸ್ ನಡೆಯಲಿದೆ. ಹಲವಾರು ಗಣ್ಯರು, ಕೆಸಿಎಫ್ ನಾಯಕರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸೊಹಾರ್ ಝೋನ್ ಮೀಡಿಯಾ ಕಾರ್ಯದರ್ಶಿ ಶಫೀಕ್ ಎಲಿಮಲೆ, ಸುಳ್ಯ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News