ಜಿ 20ಗೆ ಸೌದಿ ಅರೇಬಿಯ ಸಾರಥ್ಯ

Update: 2019-12-01 17:40 GMT

ರಿಯಾದ್, ಡಿ.1: ಜಿ 20 ಒಕ್ಕೂಟದ ಅಧ್ಯಕ್ಷತೆಯನ್ನು ಸೌದಿ ಅರೇಬಿಯ ರವಿವಾರ ವಹಿಸಿಕೊಂಡಿದೆ. ಜಿ 20 ಶೃಂಗಸಭೆಯ ನೇತೃತ್ವವನ್ನು ವಹಿಸಿದ ಪ್ರಪ್ರಥಮ ಅರಬ್ ರಾಷ್ಟ್ರವೆಂಬ ದಾಖಲೆಯನ್ನು ಅದು ನಿರ್ಮಿಸಿದೆ.

ಜಗತ್ತಿನ ಬಲಾಢ್ಯ ಅರ್ಥಿಕತೆಯ ರಾಷ್ಟ್ರಗಳ ಕೂಟವಾದ ಜಿ20ಯ ಅಧ್ಯಕ್ಷತೆಯನ್ನು ಸೌದಿ ಅರೇಬಿಯವು ಮುಂದಿನ ವರ್ಷ ಜಪಾನ್‌ನಿಂದ ವಹಿಸಿಕೊಂಡಿದೆ. 2020ರ ನವೆಂಬರ್ 21-22ರಂದು ಜಿ20 ಶೃಂಗಸಭೆಯು ರಿಯಾದ್‌ನಲ್ಲಿ ನಡೆಯಲಿದೆ. ಮಹಿಳೆಯರಿಗೆ ಹೆಚ್ಚಿನ ಹಕ್ಕುಗಳ ನೀಡಿಕೆ ಸೇರಿದಂತೆ ಸೌದಿ ಅರೇಬಿಯವು ದೇಶದಲ್ಲಿ ಹಲವಾರು ಉದಾರೀಕರಣ ನೀತಿಗಳನ್ನು ಜಾರಿಗೊಳಿಸಿದೆ.ಆದರೆ ಪತ್ರಕರ್ತ ಜಮಾಲ್ ಖಶೋಗಿ ಅವರ ಕೊಲೆ ಪ್ರಕರಣ ಹಾಗೂ ಭಿನ್ನಮತೀಯರ ವಿರುದ್ಧ ಕಠಿಣ ಕ್ರಮಗಳ ಜಾರಿಗೆ ಸಂಬಂಧಿಸಿ ಸೌದಿ ಅರೇಬಿಯ ನಿಲುವುಗಳು ಭಾರೀ ಟೀಕೆಗೊಳಗಾಗಿವೆ.

 ಸೌದಿ ಅರೇಬಿಯವು ಇಂದಿನಿಂದ ಜಿ20 ಶೃಂಗಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದು, 2020ರಲ್ಲಿ ರಿಯಾದ್‌ನಲ್ಲಿ ಅದರ ಶೃಂಗಸಭೆ ನಡೆಯಲಿದೆ’’ ಎಂದು ಸೌದಿ ಪ್ರೆಸ್ ಏಜೆನ್ಸಿ ತಿಳಿಸಿದೆ.

ಜಿ20 ಶೃಂಗಸಭೆಯ ಅಧ್ಯಕ್ಷತೆ ದೊರೆತಿರುವುದು ಅಂತಾರಾಷ್ಟ್ರೀಯ ವಿಷಯಗಳಲ್ಲ್ಲಿ ಸಮಾನಾಭಿಪ್ರಾಯವನ್ನು ರೂಪಿಸಲು ಸೌದಿ ಆರೇಬಿಯಕ್ಕೆ ದೊರೆತ ಸದವಕಾಶವಾಗಿದೆಯೆಂದು ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ತಿಳಿಸಿದ್ದಾರೆ.

ಜಿ20 ಶೃಂಗಸಭೆಗೆ ಪೂರ್ವಭಾವಿಯಾಗಿ ಸೌದಿ ಅರೇಬಿಯವು ಸಚಿವಾಂಗ ಸಭೆಗಳು ಸೇರಿದಂತೆ 100ಕ್ಕೂ ಅಧಿಕ ಕಾರ್ಯಕ್ರಮಗಳು ಹಾಗೂ ಸಮಾವೇಶಗನ್ನು ಆಯೋಜಿಸಲಿದೆಯೆಂದು ಸೌದಿ ಪ್ರೆಸ್ ಏಜೆನ್ಸಿ ತಿಳಿಸಿದೆ.

ಸೌದಿ ಅರೇಬಿಯ ಜಿ20ಯ ಅಧ್ಯಕ್ಷನಾಗಿ ಹವಾಮಾನ ಬದಲಾವಣೆ, ಕಡಿಮೆ ಜನನ ಪ್ರಮಾಣ, ಹಾಗೂ ವಯೋವೃದ್ಧ ಸಮಾಜ ಸೇರಿದಂತೆ ಹಲವಾರು ಜನಸಂಖ್ಯಾತ್ಮಕ ಸಮಸ್ಯೆಗಳನ್ನು ಜಿ 20ಯ ಅಧ್ಯಕ್ಷನಾಗಿ ಹಲವಾರು ಸವಾಲುಗಳಿ ಸ್ಪಂದಿಸಬೇಕಾಗಿದೆ. ಆದರೆ ಹೆಚ್ಚುತ್ತಿರುವ ಜನಮರುಳುವಾದ ಹಾಗೂ ರಾಷ್ಟ್ರವಾದವು ಬಹುಪಕ್ಷೀಯ ಮಟ್ಟದಲ್ಲಿ ಪ್ರಗತಿಗೆ ಹಿನ್ನಡೆಯಾಗಿದೆಯೆಂದು ಸೌದಿ ಅರೇಬಿಯ ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News