×
Ad

ದಿಗ್ಬಂಧನಗಳ ಹೊರತಾಗಿಯೂ ತೈಲ ಮಾರಾಟ: ಇರಾನ್

Update: 2019-12-03 23:09 IST

ದುಬೈ, ಡಿ. 3: ಇರಾನ್ ರಫ್ತುಗಳ ಮೇಲೆ ಅಮೆರಿಕ ದಿಗ್ಬಂಧನಗಳನ್ನು ವಿಧಿಸಿರುವ ಹೊರತಾಗಿಯೂ, ಇರಾನ್ ತನ್ನ ತೈಲವನ್ನು ಮಾರಾಟ ಮಾಡುತ್ತಿದೆ ಎಂದು ಇರಾನ್‌ನ ಉಪಾಧ್ಯಕ್ಷ ಇಶಾಕ್ ಜಹಾಂಗೀರಿ ಹೇಳಿರುವುದಾಗಿ ಆ ದೇಶದ ಸರಕಾರಿ ಟಿವಿ ಸೋಮವಾರ ವರದಿ ಮಾಡಿದೆ.

ಇರಾನ್ ಮೇಲಿನ ಅಮೆರಿಕದ ‘ಗರಿಷ್ಠ ಒತ್ತಡ’ ವಿಫಲವಾಗಿದೆ ಎಂದು ಅವರು ತಿಳಿಸಿದ್ದಾರೆ.

‘‘ಅಮೆರಿಕದ ಒತ್ತಡ ಹಾಗೂ ನಮ್ಮ ತೈಲ ರಫ್ತುಗಳ ಮೇಲೆ ಅದು ಹೇರಿರುವ ದಿಗ್ಬಂಧನಗಳ ಹೊರತಾಗಿಯೂ, ಇತರ ವಿಧಾನಗಳನ್ನು ಬಳಸಿ ನಮ್ಮ ತೈಲವನ್ನು ಮಾರಾಟ ಮಾಡುವುದನ್ನು ನಾವು ಮುಂದುವರಿಸಿದ್ದೇವೆ. ಅಮೆರಿಕದ ದಂಡನಾ ಕ್ರಮಗಳಿಗೆ ಬೆದರಿ ಮಿತ್ರ ದೇಶಗಳೂ ನಮ್ಮ ತೈಲ ಖರೀದಿಯನ್ನು ನಿಲ್ಲಿಸಿದಾಗಲೂ ನಾವು ತೈಲ ಮಾರಾಟವನ್ನು ಮುಂದುವರಿಸಿದ್ದೇವೆ’’ ಎಂದು ಜಹಾಂಗೀರಿ ಹೇಳಿದರು.

2015ರಲ್ಲಿ ಇರಾನ್ ಜಾಗತಿಕ ಶಕ್ತ ದೇಶಗಳೊಂದಿಗೆ ಮಾಡಿಕೊಂಡ ಪರಮಾಣು ಒಪ್ಪಂದದಿಂದ ಅಮೆರಿಕ ಕಳೆದ ವರ್ಷದ ಮೇ ತಿಂಗಳಲ್ಲಿ ಹಿಂದೆಗೆದುಕೊಂಡಿತ್ತು ಹಾಗೂ ಮತ್ತೆ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News