ಓಮಾನ್ ದೊರೆ ನಿಧನಕ್ಕೆ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಸಂತಾಪ

Update: 2020-01-13 06:57 GMT

ದುಬೈ: ಕೊಲ್ಲಿಯ ಪ್ರಮುಖ ರಾಷ್ಟ್ರವಾದ ಸುಲ್ತಾನೇಟ್ ಓಫ್ ಓಮಾನ್ ಇದರ ದೊರೆ ಖಾಬೂಸ್ ಬಿನ್ ಸೈದ್ ವರ ನಿಧನಕ್ಕೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ಅಂತರಾಷ್ಟ್ರೀಯ ಸಮಿತಿ (KCF INC) ಸಂತಾಪ ವ್ಯಕ್ತಪಡಿಸಿತು.

ದೀರ್ಘ ಕಾಲವಾಗಿ ಓಮಾನ್ ಆಳಿದ ಸುಲ್ತಾನ್ ಭಾರತೀಯರಿಗೆ ಆಪ್ತರಾಗಿದ್ದು, ಕನ್ನಡಿಗರ ಸಹಿತ ಲಕ್ಷಾಂತರ ಭಾರತೀಯರು ಓಮಾನಿನಲ್ಲಿ ಉದ್ಯೋಗದಲ್ಲಿದ್ದು, ಆಧುನಿಕ ಓಮಾನ್ ನಿರ್ಮಾಣದಲ್ಲಿ ಅವರ ಸೇವೆಯನ್ನು ಖಾಬೂಸ್ ರವರು ಯಾವಾಗಲೂ ಬಹು ಕೃತಜ್ಞತೆಯೊಂದಿಗೆ ಸ್ಮರಿಸುತ್ತಿದ್ದರು. ಜಗತ್ತಿನಾದ್ಯಂತ ಹಲವು ರಾಷ್ಟ್ರಗಳಿಂದ ಉದ್ಯೋಗ ಅರಸಿ ಬಂದವರಿಗೆ ಜೀವನೋಪಾಯವನ್ನು ನೀಡಲು ತನ್ನ ರಾಷ್ಟ್ರದ ಜನತೆಯನ್ನು ಸಜ್ಜುಗೊಳಿಸಿ, ರಾಷ್ಟ್ರದ ಕೈಗಾರಿಕೆ ಮತ್ತು ಮೂಲಭೂತ ಸೌಕರ್ಯಗಳಲ್ಲಿ ಅತೀ ಹೆಚ್ಚಿನ ಕಾಳಜಿ ವಹಿಸಿ ಪ್ರಪಂಚದ ಮುಂಚೂಣಿ ರಾಷ್ಟ್ರವಾಗಲು ಪ್ರಯತ್ನಿಸಿದ ಅಪ್ರತಿಮ ನಾಯಕ ಸುಲ್ತಾನ್ ಖಾಬೂಸ್ ರವರ ಅಂತ್ಯವು ಒಮಾನಿಗೆ ಮಾತ್ರವಲ್ಲ ಎಲ್ಲಾ ಮನುಷ್ಯ ಸ್ನೇಹಿಗಳಿಗೆ ದುಃಖ ತಂದಿರಿಸಿದೆ. ಅವರ ಆತ್ಮಶಾಂತಿಯನ್ನು ಆಗ್ರಹಿಸಿ ಪ್ರಾರ್ಥನಾ ಕಾರ್ಯಕ್ರಮ ಸಂಘಟಿಸಲು KCF ತನ್ನೆಲ್ಲ ಘಟಕಗಳಿಗೆ ಸೂಚಿಸಿದೆ ಎಂದು KCF ಸಂತಾಪ ಸೂಚಕ ಪ್ರಕಟಣೆಯಲ್ಲಿ ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News