27 ಗಂಟೆಗಳಲ್ಲಿ ಅಬುಧಾಬಿಯಿಂದ ದುಬೈವರೆಗೆ ಓಡಿದ ಭಾರತೀಯ

Update: 2020-02-08 11:08 GMT

ಅಬುಧಾಬಿ: ದೈಹಿಕ ಕ್ಷಮತೆ ಅಥವಾ ಫಿಟ್ನೆಸ್‍ ಗೆ ಆದ್ಯತೆ ನೀಡಲು ಯುಎಇಯ ಯುವಜನತೆಯನ್ನು ಪ್ರೇರೇಪಿಸುವ ಉದ್ದೇಶದೊಂದಿಗೆ ಕೇರಳ ಮೂಲದ 30 ವರ್ಷದ ಅಲ್ಟ್ರಾ ಮ್ಯಾರಥಾನ್ ಪಟುವೊಬ್ಬರು ಅಬುಧಾಬಿಯಿಂದ ದುಬೈ ತನಕ 118 ಕಿಮೀ ದೂರವನ್ನು 27 ಗಂಟೆಗಳಲ್ಲಿ ಕ್ರಮಿಸಿದ್ದಾರೆ. 'ಬರಿಗಾಲಿನ ಮಲ್ಲು' ಎಂದೇ ಜನಪ್ರಿಯರಾಗಿರುವ ಆಕಾಶ್ ನಂಬಿಯಾರ್ ಬೆಂಗಳೂರು ನಿವಾಸಿಯಾಗಿದ್ದಾರೆ.

ತಮ್ಮ ಮ್ಯಾರಥಾನ್ ಓಟವನ್ನು ಜನವರಿ 25ರಂದು ಅಬುಧಾಬಿಯ ಕಾರ್ನಿಕ್‍ ನಿಂದ ಆರಂಭಿಸಿದ ಅವರು ದುಬೈನ ಬಟ್ಟುಟ ಮಾಲ್ ಅನ್ನು ಜನವರಿ 26ರಂದು ಗಣರಾಜ್ಯೋತ್ಸವ ದಿನ ತಲುಪಿದ್ದಾರೆ.

``ಫಿಟ್ನೆಸ್‍ಗೆ ಆದ್ಯತೆ ನೀಡಬೇಕೆಂದು ಯುಎಇ ಯುವಜನತೆಗೆ ಪರಿಣಾಮಕಾರಿ ಸಂದೇಶ ನೀಡಿ ಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಈ ಸವಾಲನ್ನು ನಾನು ಕೈಗೆತ್ತಿಕೊಂಡೆ'' ಎಂದು ನಂಬಿಯಾರ್ ಹೇಳುತ್ತಾರೆ.

ಅಬುಧಾಬಿಯಿಂದ ಮಕ್ಕಾ ತನಕ ಓಡಿದ ತಮ್ಮ ಸ್ನೇಹಿತ ಖಾಲಿದ್ ಅಲ್ ಸುವೈದಿ ಅವರಿಂದ ಸ್ಫೂರ್ತಿಯನ್ನು ತಾವು ಪಡೆದಿದ್ದಾಗಿಯೂ ಅವರು ತಿಳಿಸುತ್ತಾರೆ.

ಅಬುಧಾಬಿ-ದುಬೈ ರನ್  ಆಕಾಶ್ ಅವರ ಮೊದಲ ಅಲ್ಟ್ರಾ ಮ್ಯಾರಥಾನ್ ಆಗಿಲ್ಲ. ಈ ಹಿಂದೆ ಅವರು ಶ್ರೀಲಂಕಾದ ರಾಜಧಾನಿ ಕೊಲಂಬೋದಿಂದ ಪುನವತ್ತುನ ತನಕ 120 ಕಿಮೀ ದೂರ ಕ್ರಮಿಸಿದ್ದರು,

ಮುಂದಿನ ಐದು ತಿಂಗಳಲ್ಲಿ ಅವರು ಇನ್ನೊಂದು ಇದೇ ರೀತಿಯ ಯೋಜನೆಯನ್ನು ಹಾಕಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News