ಡಿ.ಕೆ.ಎಸ್.ಸಿ. ಮದೀನಾ ಮುನವ್ವರ ಘಟಕದ ಮಹಾಸಭೆ

Update: 2020-02-23 05:31 GMT

ಮದೀನಾ ಮುನವ್ವರ, ಫೆ.23: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್‌ (ಡಿ.ಕೆ.ಎಸ್.ಸಿ.) ಮದೀನಾ ಮುನವ್ವರ ಘಟಕದ ವಾರ್ಷಿಕ ಮಹಾಸಭೆಯು ಮದೀನಾದಲ್ಲಿ ಇತ್ತೀಚೆಗೆ ನಡೆಯಿತು.

ಸಭೆಯನ್ನು ಅಲ್ ಖಾದಿಸ ಕಾವಳಕಟ್ಟೆ ಇದರ ಸೌದಿ ಅರೇಬಿಯಾದ ಸಂಚಾಲಕ ಯೂಸುಫ್ ಮದನಿ ಕೊಯ್ಯೂರು  ಉದ್ಘಾಟಿಸಿದರು. ಡಿ.ಕೆ.ಎಸ್.ಸಿ. ಕೇಂದ್ರ ಸಮಿತಿಯ ಉಪಾಧ್ಯಕ್ಷ ಇಮ್ತಿಯಾಝ್ ಕುಂದಾಪುರ  ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಿ.ಕೆ.ಎಸ್.ಸಿ. ತಾಯಿಫ್ ಘಟಕದ ಪ್ರಧಾನ ಕಾರ್ಯದರ್ಶಿ ಮಜೀದ್ ಕನ್ನಂಗಾರ್ ಮಾತನಾಡಿ ಸಂಘಟನೆಯು ನಡೆದು ಬಂದ ಹಾದಿಯನ್ನು ಸವಿಸ್ತಾರವಾಗಿ ವಿವರಿಸಿದರು.

 ಚುನಾವಣಾ ಅಧಿಕಾರಿಯಾಗಿದ್ದ ಡಿ.ಕೆ.ಎಸ್.ಸಿ. ಮಕ್ಕತುಲ್ ಮುಕರ್ರಮ ವಲಯ ಪ್ರ. ಕಾರ್ಯದರ್ಶಿ ಇಸ್ಮಾಯೀಲ್ ಹೈದ್ರೋಸ್ ಮೂಡಿಗೆರೆ ಉಪಸ್ಥಿತಿಯಲ್ಲಿ ಹಳೆಯ  ಸಮಿತಿಯನ್ನು ಬರ್ಖಾಸ್ತುಗೊಳಿಸಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ನೂತನ ಸಮಿತಿಯ ಅಧ್ಯಕ್ಷರಾಗಿ ಮನ್ಸೂರ್ ಉಚ್ಚಿಲ, ಪ್ರಧಾನ ಕಾರ್ಯದರ್ಶಿಯಾಗಿ ಇಕ್ಬಾಲ್ ಕುಪ್ಪೆಪದವು ಪುನರಾಯ್ಕೆಗೊಂಡರು. ಕೋಶಾಧಿಕಾರಿಯಾಗಿ ಅಶ್ರಫ್ ನ್ಯಾಷನಲ್, ಸಮಿತಿಯ ಗೌರವಾಧ್ಯಕ್ಷರಾಗಿ ಮುಹಮ್ಮದಲಿ ಪಾಣೆಮಂಗಳೂರು, ಉಪಾಧ್ಯಕ್ಷರಾಗಿ ಸುಲೈಮಾನ್ ಮಿತ್ತೇರಿಪಾದೆ ಹಾಗೂ ಅಶ್ರಫ್ ಕಿನ್ಯ ಆಯ್ಕೆಯಾದರು.

ಜೊತೆ ಕಾರ್ಯದರ್ಶಿಯಾಗಿ ಜುನೈದ್  ಉಳ್ಳಾಲ ಹಾಗೂ ಆಸಿಫ್ ಬದ್ಯಾರ್, ಸಂಚಾಲಕರಾಗಿ ಅಬ್ದುರ್ರಝಾಕ್ ಅಳಕೆಮಜಲು, ಅಬ್ದುಲ್ ಅಝೀಝ್ ಸುರಿಬೈಲ್, ಸರ್ಫಾಝ್ ಕುಪ್ಪೆಪದವು ಹಾಗೂ ಬದ್ರುದ್ದೀನ್ ಕಬಕ, ಸ್ವಲಾತ್ ಮಜ್ಲಿಸ್ ಉಸ್ತುವಾರಿಯಾಗಿ ಅಶ್ರಫ್ ಸಖಾಫಿ ನೂಜಿ,  ಸಾರ್ವಜನಿಕ ಸಂಪರ್ಕ ಕಾರ್ಯದರ್ಶಿಯಾಗಿ ಶೆರೀಫ್ ಮರವೂರುರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅಝರ್ ಕೃಷ್ಣಾಪುರ, ಅಬ್ದುರ್ರಝಾಕ್ ಬೈತಡ್ಕ, ಹುಸೈನಾರ್ ಮಾಪಲ್, ಸುಲೈಮಾನ್ ತುರ್ಕಳಿಕೆ, ಶರೀಫ್ ಮಠ, ಫಾರೂಕ್ ಅಳಕೆ, ಮುಸ್ತಫ ಕುಪ್ಪೆಪದವು, ರಫೀಕ್ ಪಾಣೆಮಂಗಳೂರು, ಆಸಿಫ್ ಕುಂಜತ್ತಬೈಲ್, ಹಸೈನಾರ್ ಫರಂಗಿಪೇಟೆ, ಆದಂ ಕಕ್ಕೆಪದವು ಅವರನ್ನು ಆಯ್ಕೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಮಕ್ಕಾ ವಲಯದ ಅಧೀನದಲ್ಲಿ ಜಿದ್ದಾ ದಲ್ಲಿ ನಡೆಯುವ 'ಫ್ಯಾಮಿಲಿ ಮುಲಾಖಾತ್'ಗೆ ಚಾಲನೆ ನೀಡಲಾಯಿತು.
ಈ ಸಭೆಯಲ್ಲಿ ಡಿ.ಕೆ.ಎಸ್.ಸಿ. ಜಿದ್ದಾ ಘಟಕದ ಪ್ರ. ಕಾರ್ಯದರ್ಶಿ ಅಮಾನುಲ್ಲಾ ವಾಮಂಜೂರು ಸಹಿತ ಹಲವಾರು ಸದಸ್ಯರು ಪಾಲ್ಗೊಂಡಿದ್ದರು.

 ಡಿ.ಕೆ.ಎಸ್.ಸಿ. ಮದೀನಾ ಮುನವ್ವರ ಘಟಕದ ಘಟಕದ ಗೌರವಾಧ್ಯಕ್ಷ ಮುಹಮ್ಮದ್ ಅಲಿ ಪಾಣೆಮಂಗಳೂರು ಸ್ವಾಗತಿಸಿದರು. ಕಾರ್ಯದರ್ಶಿ ಇಕ್ಬಾಲ್ ಕುಪ್ಪೆಪದವು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News