ಅಬುಧಾಬಿ: 8ನೇ ವರ್ಷದ ಕೆಸಿಎಫ್ ಡೇ, ಪ್ರತಿಭೋತ್ಸವ ವಿಜೇತರಿಗೆ ಅಭಿನಂಧನಾ ಸಮಾರಂಭ

Update: 2020-02-23 15:24 GMT

ಅಬುಧಾಬಿ: ಕೆಸಿಎಫ್ ಅಬುಧಾಬಿ ಝೋನ್ ವತಿಯಿಂದ ಎಂಟನೇ ವರ್ಷದ ಕೆಸಿಎಫ್ ಡೇ ಹಾಗು ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಯೋಜಿಸಿದ ಪ್ರತಿಭೋತ್ಸವದಲ್ಲಿ ವಿಜಯಿಯಾದ ಪ್ರತಿಭೆಗಳಿಗೆ ಅಭಿನಂಧನಾ ಸಮಾರಂಭವು ಅಬುಧಾಬಿ ಮದೀನಾ ಝಹೀದ್ ಲುಲು ಪಾರ್ಟಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಸುಹೈಲ್ ಸಖಾಫಿ ಉಸ್ತಾದರ ದುವಾದೊಂದಿಗೆ ಅರಂಭಗೊಂಡ ಕಾರ್ಯಕ್ರಮವನ್ನು ಕೆಸಿಎಫ್ ಯುಎಇ ರಾಷ್ಟ್ರೀಯ ಕೋಶಾಧಿಕಾರಿ ಇಬ್ರಾಹಿಂ ಬ್ರೈಟ್ ಮಾರ್ಬಲ್ ಉದ್ಘಾಟಿಸಿದರು. ಕೆಸಿಎಫ್ ಅಬುಧಾಬಿ ಝೋನ್ ಅಧ್ಯಕ್ಷರಾದ ಹಸೈನಾರ್ ಅಮಾನಿ ಅಜ್ಜಾವರ ಅಧ್ಯಕ್ಷೀಯ ಭಾಷಣ ಮಾಡಿದರು. ಕೆಸಿಎಫ್ ಅಂತರಾಷ್ಟ್ರೀಯ ಫೈನಾಸ್ಸಿಯಲ್ ಕಂಟ್ರೋಲರ್ ಅಬ್ದುಲ್ ಹಮೀದ್ ಸಹದಿ ಈಶ್ವರಮಂಗಲ ಪ್ರಾಸ್ತಾವಿಕ ಭಾಷಣಗೈದರು. ಕೆಸಿಎಫ್ ಅಬುಧಾಬಿ ಎಂಟು ವರ್ಷದ ಎಲ್ಲ ಹಾಗು ಹೋಗುಗಳನ್ನು ಝೋನ್ ನಾಯಕ ಅಹ್ಮದ್ ಕಬೀರ್ ಬಾಯಂಪಾಡಿ ವಿವರಿಸಿದರು. ಕೆಸಿಎಫ್ ಸಂಘಟನಾ ಜೀವನದ ಸಮಗ್ರ ಸಮಾಜ ಸೇವೆಯ ಬಗ್ಗೆ ವೈಯುಕ್ತಿಕ ಅನಿಸಿಕೆಗಳನ್ನು ಬಶೀರ್ ಮುಲ್ಕಿ, ಜಾವಿದ್ ನಾವುಂದ, ಮನ್ಸೂರ್ ಚಿಕ್ಕಮಂಗಳೂರು ಮತ್ತು ಹನಾನ್ ಹಂಚಿಕೊಂಡರು.

ಕೆಸಿಎಫ್ ಅಬುಧಾಬಿ ಝೋನ್ ತನ್ನ ಎಂಟನೇ ವರ್ಷದ ಹಲವಾರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಆರ್ಥಿಕ ಸಹಾಯ, ಬಡವರಿಗೆ ಮನೆ ವಸತಿಗೆ ಹಣಕಾಸಿನ ಸಹಾಯ, ಉತ್ತರ ಕರ್ನಾಟಕದ ಜನರಿಗೆ ಇಹ್ಸಾನ್ ಮೂಲಕ ದೀನೀ ಕಾರ್ಯಚಟುವಟಿಕೆಯ ಕಾರ್ಯರೂಪ ಮುಂತಾದ ಕಾರ್ಯವೈಖರಿಯನ್ನು ಸವಿವಿಸ್ತಾರವಾಗಿ ಕಾರ್ಯಕ್ರಮದಲ್ಲಿ ಸಭೆಗೆ ವಿವರಿಸಲಾಯಿತು. ಬಳಿಕ ಪ್ರತಿಭೋತ್ಸವದಲ್ಲಿ ವಿಜಯಿಯಾದ ಪ್ರತಿಭೆಗಳನ್ನು ಸನ್ಮಾನಿಸಿ ಪುರಸ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ಐಸಿಎಫ್ ಅಬುಧಾಬಿ ಸೆಂಟ್ರಲ್ ಅಧ್ಯಕ್ಷ  ಹಂಝ ಅಹ್ಸನಿ ವಯನಾಡ್, ಆರ್.ಎಸ್.ಸಿ ಯುಎಇ ರಾಷ್ಟ್ರೀಯ ಅಧ್ಯಕ್ಷ ಹಮೀದ್ ಸಖಾಫಿ ಫುಲ್ಲರಾ, ಆರ್.ಎಸ್.ಸಿ ಅಬುಧಾಬಿ ಅಧ್ಯಕ್ಷ ಇಬ್ರಾಹಿಂ ಸಹದಿ, ಐ.ಎನ್.ಸಿ ಸಂಘಟನಾ ಅಧ್ಯಕ್ಷ ಅಬ್ದುಲ್ ಹಮೀದ್ ಪಿ.ಎಂ.ಎಚ್, ಕೆಸಿಎಫ್ ಝೋನ್ ಕೋಶಾಧಿಕಾರಿ ಮುಹಮ್ಮದ್ ಅಲಿ ಬ್ರೈಟ್ ಮಾರ್ಬಲ್, ಅಡ್ಕ ಮುಹಮ್ಮದ್ ಕುಂಞ ಹಾಜಿ ಸೇರಿ ಹಲವು ನಾಯಕರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಝೋನ್ ಪ್ರ.ಕಾರ್ಯದರ್ಶಿ ಎನ್.ಕೆ ಸಿದ್ದೀಕ್ ಅಳಿಕೆ ಸ್ವಾಗತಿಸಿದರು. ಝೋನ್ ಸಂಘಟನಾ ವಿಭಾಗದ ಕಾರ್ಯದರ್ಶಿ ಉಮರ್ ಈಶ್ವರಮಂಗಲ ಧನ್ಯವಾದ ಅರ್ಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News