ಸೌದಿಯ ಪ್ರತಿಷ್ಠಿತ 'ಗ್ರೀನ್ ಕಾರ್ಡ್' ಪಡೆದ ಪ್ರಪ್ರಥಮ ಭಾರತೀಯ ಯೂಸುಫ್ ಅಲಿ

Update: 2020-03-02 18:31 GMT

ದುಬೈ,ಮಾ.2: ಅಬುಧಾಬಿಯ ಚಿಲ್ಲರೆ ಮಾರಾಟ ಕ್ಷೇತ್ರದ ಭಾರತೀಯ ಉದ್ಯಮಿ ಎಂ.ಎ.ಯೂಸುಫ್ ಅಲಿ ಅವರು ಸೌದಿ ಅರೇಬಿಯಾದ ಪ್ರತಿಷ್ಠಿತ ಸೌದಿ ಗ್ರೀನ್ ಕಾರ್ಡ್ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಲುಲು ಗ್ರೂಪ್‌ನ ಅಧ್ಯಕ್ಷರಾಗಿರುವ ಯೂಸುಫ್ ಅಲಿ (64) ಅವರು ಕಳೆದ ವರ್ಷ ಫೋರ್ಬ್ಸ್ ಮ್ಯಾಗಝಿನ್‌ನಿಂದ  ಯುಎಇಯಲ್ಲಿಯ ಅತ್ಯಂತ ಶ್ರೀಮಂತ ವಲಸಿಗ ಎಂಬ ಗರಿಮೆಗೆ ಪಾತ್ರರಾಗಿದ್ದರು.

 ಪ್ರೀಮಿಯಂ ರೆಸಿಡೆನ್ಸಿ ಎಂದು ಕರೆಯಲಾಗುವ ಸೌದಿ ಗ್ರೀನ್ ಕಾರ್ಡ್ ಯಾವುದೇ ಪ್ರಾಯೋಜಕರ ಅಗತ್ಯವಿಲ್ಲದೆ ವಲಸಿಗರಿಗೆ ಸೌದಿ ಅರೇಬಿಯಾದಲ್ಲಿ ವಾಸವಿರುವ,ದುಡಿಯುವ ಮತ್ತು ಸ್ವಂತ ವ್ಯವಹಾರ ಮತ್ತು ಆಸ್ತಿಗಳನ್ನು ಹೊಂದುವ ಹಕ್ಕನ್ನು ನೀಡುತ್ತದೆ ಎಂದು ಲುಲು ಗ್ರೂಪ್ ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News