ದುಬೈ: ಮಾ.7ರಂದು ಬ್ಯಾರೀಸ್ ಚೇಂಬರ್ಸ್ ಯುಎಇ ನೆಟ್ ವರ್ಕ್ ಸಮ್ಮಿಟ್, ಮೊಬೈಲ್ ಆ್ಯಪ್ ಬಿಡುಗಡೆ

Update: 2020-03-05 08:30 GMT

ದುಬೈ, ಮಾ.5: ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ(ಬಿಸಿಸಿಐ) ಯುಎಇ ಚಾಪ್ಟರ್ ವತಿಯಿಂದ ದುಬೈನ ಪ್ರತಿಷ್ಠಿತ ಅಡ್ರೆಸ್ ಹೋಟೆಲ್ ನ ಬಾಲ್ ರೂಮಿನಲ್ಲಿ ಮಾ.7ರಂದು ಬಿಸಿನೆಸ್ ನೆಟ್ ವರ್ಕ್ ಸಮ್ಮಿಟ್ ಮತ್ತು ಮೊಬೈಲ್ ಆ್ಯಪ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಬಿಸಿನೆಸ್ ನೆಟ್ವರ್ಕಿಂಗ್ ಮೂಲಕ ಸಮಾಜದ ಉದ್ಯಮಿಗಳನ್ನು, ವೃತ್ತಿಪರರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸಿ ಆ ಮೂಲಕ ವ್ಯಾಪಾರ ಸಬಲೀಕರಣ ಹಾಗೂ ಸಮಾಜ ಸೇವೆ ನಡೆಸುವ ಉದ್ದೇಶದೊಂದಿಗೆ ಕಳೆದ ಎರಡು ವರ್ಷಗಳಿಂದ ಯುಎಇಯಲ್ಲಿ ಸಕ್ರಿಯವಾಗಿರುವ ಬಿಸಿಸಿಐ ಯುಎಇ ಚಾಪ್ಟರ್ ಇದೀಗ ಬಿಸಿನೆಸ್ ನೆಟ್ವರ್ಕಿಂಗ್'ಗನ್ನು ಇನ್ನಷ್ಟು ಸುಲಭಗೊಳಿಸಲು ಮತ್ತು ಹೆಚ್ಚಿನ ಜನರಿಗೆ ಉಪಯುಕ್ತವಾಗಿಸುವ ಉದ್ದೇಶದಿಂದ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲು ಉದ್ದೇಶಿಸಿದೆ ಎಂದು ಯುಎಇ ಚಾಪ್ಟರ್ ಅಧ್ಯಕ್ಷ ಎಸ್.ಎಂ.ಬಶೀರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಬಿಸಿಎಫ್ ಅಧ್ಯಕ್ಷ ಡಾ. ಬಿ.ಕೆ.ಯೂಸುಫ್ ಬಿಸಿನೆಸ್ ನೆಟ್ವರ್ಕ್ ಸಮ್ಮಿಟ್ ಉದ್ಘಾಟಿಸುವರು. ಬ್ಯಾರೀಸ್ ಚೇಂಬರ್ಸ್ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ  ಮೊಬೈಲ್ ಆ್ಯಪ್ ಅನಾವರಣ ಮಾಡಲಿದ್ದಾರೆ

ಈ ಕಾರ್ಯಕ್ರಮದಲ್ಲಿ 'ಸ್ಟಾರ್ಟಪ್ ಗುರು' ಎಂದೇ ಹೆಸರುವಾಸಿಯಾಗಿರುವ ಸ್ಫೂರ್ತಿದಾಯಕ ಮಾತುಗಾರ ಜಝೀರ್ ಜಮಾಲ್ "Building Start-up for better tomorrow" ವಿಷಯದ ಕುರಿತು ಮಾತನಾಡಲಿದ್ದಾರೆ ಮತ್ತು ಬ್ಯಾರೀಸ್ ಚೇಂಬರ್ಸ್ ಯುಎಇ ಕಾರ್ಯದರ್ಶಿ, ಉದ್ಯಮಿ  ಮುಹಮ್ಮದ್ ನವೀದ್ ಮಾಗುಂಡಿ "7 habits of highly effective people” ವಿಷಯದ ಕುರಿತು ಮಾತನಾಡಲಿದ್ದಾರೆ ಎಂದು ಬ್ಯಾರೀಸ್ ಚೇಂಬರ್ಸ್ ಯುಎಇ ಚಾಪ್ಟರ್ ಉಪಾಧ್ಯಕ್ಷ ಅಬ್ದುಲ್ಲಾ ಮದುಮೂಲೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News