'ಯುಎಇಗೆ ಪ್ರಯಾಣ ನಿರ್ಬಂಧಿಸಿದ ಭಾರತ' ಎಂಬ ಸುದ್ದಿಗಳ ಬಗ್ಗೆ ಸ್ಪಷ್ಟನೆ ನೀಡಿದ ದೂತಾವಾಸ ಕಚೇರಿ

Update: 2020-03-05 10:30 GMT

ದುಬೈ: ಯುಎಇಗೆ ತೆರಳುವವರಿಗೆ ಪ್ರಯಾಣ ನಿರ್ಬಂಧಗಳನ್ನು ಭಾರತ ಹೇರಿದೆ ಎಂಬ ವರದಿಗಳನ್ನು ಅಲ್ಲಿನ ಭಾರತೀಯ ಕಾನ್ಸುಲೇಟ್ ನಿರಾಕರಿಸಿದೆ.

"ಕೊರೋನ ವೈರಸ್ ಪ್ರಕರಣಗಳ ಕಾರಣದಿಂದ ಸಂಯುಕ್ತ ಅರಬ್ ಸಂಸ್ಥಾನಕ್ಕೆ ಪ್ರಯಾಣಿಸುವ ವಿರುದ್ಧ ಯಾವುದೇ ನಿರ್ದಿಷ್ಟ ಸೂಚನೆಯಿಲ್ಲ. ಆದರೆ ಹಲವು ಸಮಾರಂಭಗಳನ್ನು ಮುಂದೂಡಲಾಗಿದೆ  ಹಾಗೂ ಮಾರ್ಚ್ 8ರಿಂದ ಆರಂಭಗೊಂಡು ಶಾಲೆಗಳಿಗೆ ನಾಲ್ಕು ವಾರಗಳ ರಜೆ ನೀಡಲಾಗಿದೆ'' ಎಂದು ಕಾನ್ಸುಲೇಟ್ ಟ್ವೀಟ್ ಮಾಡಿದೆಯಲ್ಲದೆ, ಭಾರತದ ಕೆಲ ಟಿವಿ ವಾಹಿನಿಗಳು ಪ್ರಯಾಣ ನಿರ್ಬಂಧ ಕುರಿತು ಮಾಡಿರುವ ವರದಿಯನ್ನು ನಿರಾಕರಿಸಿದೆ.

ಅದೇ ಸಮಯ ಭಾರತ ಮತ್ತು ಸಂಯುಕ್ತ ಅರಬ್ ಸಂಸ್ಥಾನದ ಸರಕಾರಗಳು ಕೊರೋನಾ ವೈರಸ್ ಪ್ರಕರಣಗಳ ಹಿನ್ನೆಲೆಯಲ್ಲಿ ನೀಡಲಾಗುವ ಸೂಚನೆಗಳ ಮೇಲೆ ಗಮನವಿಡಬೇಕೆಂದು ಕಾನ್ಸುಲೇಟ್ ತಿಳಿಸಿದೆ.

ಸಂಯುಕ್ತ ಅರಬ್ ಸಂಸ್ಥಾನದಲ್ಲಿ ಶಾಲೆಗಳು ರವಿವಾರದಿಂದ ಆರಂಭಗೊಂಡು ನಾಲ್ಕು ವಾರಗಳ ಕಾಲ ಮುಚ್ಚಲಿದ್ದರೂ ಸಿಬಿಎಸ್‍ಇ ಪರೀಕ್ಷೆಗಳು ಎಂದಿನಂತೆ ನಡೆಯಲಿದೆ. ಆದರೆ ಶಾಲೆಗಳು ವಿದ್ಯಾರ್ಥಿಗಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಎಂದು ಭಾರತೀಯ ಹೈಕಮಿಷನ್ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News