ಉಮ್ರಾ ಯಾತ್ರೆಯನ್ನು ಸ್ಥಗಿತಗೊಳಿಸಿದ ಸೌದಿ

Update: 2020-03-05 16:47 GMT

ರಿಯಾದ್, ಮಾ. 5: ಕೊರೋನವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ, ಸೌದಿ ಅರೇಬಿಯ ಬುಧವಾರ ಉಮ್ರಾ ಯಾತ್ರೆಯನ್ನು ಸ್ಥಗಿತಗೊಳಿಸಿದೆ. ಇದು ಅಭೂತಪೂರ್ವ ಕ್ರಮವಾಗಿದ್ದು, ಹಜ್ ಯಾತ್ರೆಯ ಬಗ್ಗೆಯೂ ಅನಿಶ್ಚಿತತೆ ಏರ್ಪಟ್ಟಿದೆ.

ಉಮ್ರಾ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಸೌದಿ ಅರೇಬಿಯದ ಅಧಿಕೃತ ಸುದ್ದಿ ಸಂಸ್ಥೆ ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.

ವರ್ಷವಿಡೀ ನಡೆಯುವ ಉಮ್ರಾ ಯಾತ್ರೆಯಲ್ಲಿ ವಾರ್ಷಿಕವಾಗಿ ಲಕ್ಷಾಂತರ ಮಂದಿ ಭಾಗವಹಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News