'ಜನಾಂಗೀಯವಾದ': ವಿದೇಶಿ ಕಾರ್ಮಿಕನಿಗೆ ಈ ಕೆಲಸ ನೀಡಿದ ಸೌದಿಯ ಅರಾಮ್ಕೋ ವಿರುದ್ಧ ಆಕ್ರೋಶ

Update: 2020-03-11 11:30 GMT

ರಿಯಾದ್: ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಸ್ಯಾನಿಟೈಸರ್ ಯಂತ್ರವನ್ನು ವಿದೇಶಿ ಕಾರ್ಮಿಕನೊಬ್ಬನ ದೇಹಕ್ಕೆ ಕಟ್ಟಿದ ಆರೋಪದಲ್ಲಿ ಸೌದಿ ಅರೇಬಿಯಾದ ಅರಾಮ್ಕೊ ತೈಲ ಕಂಪೆನಿ ಭಾರೀ ಟೀಕೆಗೊಳಗಾಗಿದೆ.

ಸೌದಿಯೇತರ ವ್ಯಕ್ತಿಯೊಬ್ಬ ವಾಕಿಂಗ್-ಟಾಕಿಂಗ್ ಹ್ಯಾಂಡ್ ಸ್ಯಾನಿ ಟೈಸರ್ ರೀತಿಯ ಬಾಡಿ ಸೂಟ್ ಧರಿಸಿದ್ದ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಂಪೆನಿ ತನ್ನ ಉದ್ಯೋಗಿಯನ್ನು ಈ ರೀತಿ ಬಳಸಿ ಆತನನ್ನು ಶೋಷಿಸಿದೆಯಲ್ಲದೆ ಜನಾಂಗೀಯವಾದ ನಡೆಸಿದ ಎಂಬ ಆರೋಪ ಕೇಳಿ ಬಂದಿದೆ.

ಈ ಸ್ಯಾನಿಟೈಸರ್ ರೀತಿಯ ಬಾಡಿ ಸೂಟ್ ಧರಿಸಿ ಜನರಿಗೆ ಸ್ಯಾನಿಟೈಸರ್ ಒದಗಿಸುತ್ತಿದ್ದ ಕಾರ್ಮಿಕನೂ ಮಾಸ್ಕ್ ಕಟ್ಟಿಕೊಂಡಿದ್ದು ಅರಾಮ್ಕೊ ಕಚೇರಿಯ ಹೊರಗೆ ನಡೆದಾಡುತ್ತಿರುವುದು ಕಾಣಿಸಿದೆ. ಇದು ಅರಾಮ್ಕೊದ ಯಾವ ಕಚೇರಿಯ ಚಿತ್ರವೆಂದು ಸ್ಪಷ್ಟವಾಗಿಲ್ಲ. ಇದು ಮಾನವೀಯತೆಯ ವಿರುದ್ಧದ ಕೃತ್ಯವೆಂದೂ ಹಲವರು ಟೀಕಿಸಿದ್ದಾರೆ.

ಮಂಗಳವಾರ ತನ್ನ ತಪ್ಪಿನ ಬಗ್ಗೆ ಕಂಪೆನಿ ಕ್ಷಮೆಯಾಚಿಸಿದ್ದು ಕೊರೊನಾವೈರಸ್ ಕುರಿತು ಜಾಗೃತಿ ಮೂಡಿಸುವುದಷ್ಟೇ ತನ್ನ ಉದ್ದೇಶವಾಗಿತ್ತು ಎಂದು ಹೇಳಿಕೊಂಡಿದೆಯಲ್ಲದೆ ತನ್ನ ಉದ್ಯೋಗಿ ಹ್ಯಾಂಡ್ ಸ್ಯಾನಿಟೈಸರ್ ಬಾಡಿ ಸೂಟ್ ಧರಿಸಿ ಸ್ಯಾನಿಟೈಸರ್ ನೀಡುತ್ತಿರುವ ಕೆಲಸವನ್ನು ಸ್ಥಗಿತಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News