ಯುಎಇ: ಕೊರೋನವೈರಸ್‌ಗೆ 2 ಬಲಿ

Update: 2020-03-23 17:53 GMT

ದುಬೈ, ಮಾ. 23: ಕೋವಿಡ್-19 ಕಾಯಿಲೆಯಿಂದಾಗಿ ಎರಡು ಸಾವುಗಳು ಸಂಭವಿಸಿವೆ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಶುಕ್ರವಾರ ಘೋಷಿಸಿದೆ. ಇವುಗಳು ಆ ದೇಶದಲ್ಲಿ ವರದಿಯಾಗಿರುವ ಮೊದಲ ಕೊರೋನವೈರಸ್ ಸಾವಿನ ಪ್ರಕರಣಗಳಾಗಿವೆ.

ಅದೇ ವೇಳೆ, 153 ಸೋಂಕು ಪ್ರಕರಣಗಳನ್ನೂ ಅದು ವರದಿ ಮಾಡಿದೆ. ಈ ಪೈಕಿ 38 ಮಂದಿ ಚೇತರಿಸಿಕೊಂಡಿದ್ದಾರೆ.

ಉದ್ಯೋಗ ಡಿತವಿಲ್ಲ; ತಾತ್ಕಾಲಿಕ ವೇತನ ಕಡಿತ: ಎಮಿರೇಟ್ಸ್ ಮುಖ್ಯಸ್ಥ

ಎಮಿರೇಟ್ಸ್ ಕಂಪೆನಿಯ ಹೆಚ್ಚಿನ ಉದ್ಯೋಗಿಗಳ ಮೂಲವೇತನವನ್ನು 3 ತಿಂಗಳ ಅವಧಿಗೆ 25 ಶೇಕಡದಿಂದ 50 ಶೇಕಡದವರೆಗೆ ಕಡಿತಗೊಳಿಸಲಾಗುವುದು ಎಂದು ವಾಯುಯಾನ ಸಂಸ್ಥೆಯ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ಅಹ್ಮದ್ ಬಿನ್ ಸಯೀದ್ ಅಲ್-ಮಕ್ತೂಮ್ ಹೇಳಿದ್ದಾರೆ.

ಆದರೆ, ಯಾರ ಉದ್ಯೋಗವನ್ನೂ ಕಡಿತಗೊಳಿಸುವುದಿಲ್ಲ ಎಂಬ ಭರವಸೆಯನ್ನು ಅವರು ನೀಡಿದ್ದಾರೆ.

‘‘ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ಬದಲು, ತಾತ್ಕಾಲಿಕ ಮೂಲವೇತನ ಕಡಿತ ಮಾಡಲು ನಿರ್ಧರಿಸಿದ್ದೇವೆ. ನಮ್ಮ ಉದ್ಯೋಗಿಗಳನ್ನು ರಕ್ಷಿಸಲು ನಾವು ಬಯಸಿದ್ದೇವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News