ಹಜ್ ಸಿದ್ಧತೆಯನ್ನು ತಾತ್ಕಾಲಿಕವಾಗಿ ಮುಂದೂಡಿ: ಮುಸ್ಲಿಮರಿಗೆ ಸೌದಿ ಹಜ್ ಸಚಿವರ ಕರೆ

Update: 2020-04-01 15:51 GMT

ರಿಯಾದ್, ಎ. 1: ಕೊರೋನವೈರಸ್ ಸಾಂಕ್ರಾಮಿಕ ಸೃಷ್ಟಿಸಿರುವ ಅನಿಶ್ಚಿತತೆಯ ಹಿನ್ನೆಲೆಯಲ್ಲಿ, ವಾರ್ಷಿಕ ಹಜ್ ಯಾತ್ರೆಗೆ ಮಾಡುತ್ತಿರುವ ಸಿದ್ಧತೆಗಳನ್ನು ತಾತ್ಕಾಲಿಕವಾಗಿ ಮುಂದೂಡುವಂತೆ ಸೌದಿ ಅರೇಬಿಯದ ಹಜ್ ಸಚಿವ ಮುಹಮ್ಮದ್ ಬಿನ್‌ತಿನ್ ಮುಸ್ಲಿಮರಿಗೆ ಮಂಗಳವಾರ ಮನವಿ ಮಾಡಿದ್ದಾರೆ.

ವರ್ಷವಿಡೀ ನಿರ್ವಹಿಸಲಾಗುವ ‘ಉಮ್ರಾ’ ಯಾತ್ರೆಯನ್ನು ಈ ವರ್ಷದ ಆರಂಭದಲ್ಲಿ ಸೌದಿ ಅರೇಬಿಯ ಸ್ಥಗಿತಗೊಳಿಸಿತ್ತು.

‘‘ಯಾತ್ರಿಕರು ಮತ್ತು ಉಮ್ರಾ ನಿರ್ವಹಿಸುವವರಿಗೆ ಸೇವೆ ಸಲ್ಲಿಸಲು ಸೌದಿ ಅರೇಬಿಯ ಸಂಪೂರ್ಣ ಸಿದ್ಧವಾಗಿದೆ’’ ಎಂದು ಸಚಿವರು ಸರಕಾರಿ ಒಡೆತನದ ‘ಅಲ್-ಅಕ್ಬರಿಯ’ ಟೆಲಿವಿಶನ್‌ಗೆ ತಿಳಿಸಿದರು.

‘‘ಆದರೆ, ಕೊರೋನವೈರಸ್ ಸಾಂಕ್ರಾಮಿಕದಿಂದ ಉಂಟಾಗಿರುವ ಪ್ರಸಕ್ತ ಸನ್ನಿವೇಶದಲ್ಲಿ ಮುಸ್ಲಿಮರು ಮತ್ತು ನಾಗರಿಕರ ಆರೋಗ್ಯವನ್ನು ಕಾಪಾಡಲು ಸೌದಿ ಅರೇಬಿಯ ಬದ್ಧವಾಗಿದೆ. ಹಾಗಾಗಿ, ಪರಿಸ್ಥಿತಿ ತಿಳಿಗೊಳ್ಳುವವರೆಗೆ ಹಜ್‌ಗಾಗಿ ವ್ಯವಸ್ಥೆಗಳನ್ನು ಮಾಡಿಕೊಳ್ಳುವುದನ್ನು ಮುಂದೂಡುವಂತೆ ಎಲ್ಲ ದೇಶಗಳಲ್ಲಿರುವ ನಮ್ಮ ಮುಸ್ಲಿಮ್ ಸಹೋದರರಲ್ಲಿ ವಿನಂತಿಸುತ್ತೇನೆ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News