ಸೌದಿ: ಕಣ್ಣೂರು ಮೂಲದ ವ್ಯಕ್ತಿ ಸೇರಿದಂತೆ ನಾಲ್ವರು ಕೊರೋನಗೆ ಬಲಿ

Update: 2020-04-05 16:35 GMT
ಸಾಂದರ್ಭಿಕ ಚಿತ್ರ

ಜಿದ್ದಾ, ಎ.5: ಸೌದಿ ಅರೇಬಿಯದಲ್ಲಿಯೂ ಕೊರೋನ ತನ್ನ ಕಬಂಧಬಾಹುಗಳನ್ನು ಚಾಚುತ್ತಿದ್ದು, ಕೇರಳದ ಕಣ್ಣೂರು ಮೂಲದ ಯುವಕ ಸೇರಿದಂತೆ 4 ಮಂದಿ ಈ ಭೀಕರ ಸೋಂಕಿಗೆ ಬಲಿಯಾಗಿದ್ದಾರೆ.

ಕೊರೋನ ಹರಡುವುದನ್ನು ತಡೆಯಲು ಜಿದ್ದಾದ ಆರು ಜಿಲ್ಲೆಗಳಲ್ಲಿ ಹೇರಲಾಗಿರುವ ಕರ್ಫ್ಯೂವನ್ನು ದಿನದ 24 ತಾಸುಗಳವರೆಗೂ ವಿಸ್ತರಿಸಲಾಗಿದೆ. ಸೌದಿ ಆರೇಬಿಯದಲ್ಲಿ ಈಗ ಇರುವ ವಿದೇಶಿಯರ ವಾಸ್ತವ್ಯದ ಅವಧಿಯನ್ನು 3 ತಿಂಗಳುಗಳ ಅವಧಿಗೆ ವಿಸ್ತರಿಸಲಾಗಿದೆ. ಇತ್ತ ಕೊರೋನ ಹಾವಳಿಯಿಂದ ತಲ್ಲಣಿಸಿರುವ ಯುಎಇನಲ್ಲಿಯೂ ವಿವಾಹ ಸಮಾರಂಭ ಸೇರಿದಂತೆ ಎಲ್ಲಾ ರೀತಿಯ ಸಾಮೂಹಿಕ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ.

ಮನೆಯಲ್ಲಿ ಕ್ವಾರಂಟೈನ್‌ನಲ್ಲಿರುವವರ ಮೇಲೆ ನಿಗಾವಿಡಲು ಮೊಬೈಲ್ ಆ್ಯಪ್ಲಿಕೇಶನ್ ಅನ್ನು ಬಳಸಲಾಗುತ್ತಿದೆ. ಯುಎಇನಲ್ಲಿ ಈಗ ಸೋಂಕಿತರ ಸಂಖ್ಯೆ 1505ಕ್ಕೆ ತಲುಪಿದ್ದು, 10 ಮಂದಿ ಸಾವನ್ನಪ್ಪಿದ್ದಾರೆ. ನಿನ್ನೆ 50 ಮಂದಿ ಭಾರತೀಯರಿಗೆ ಸೋಂಕು ತಗಲಿರುವುದು ದೃಢಪಟ್ಟಿದ್ದು, ಇದರೊಂದಿಗೆ ಆ ದೇಶದ 165 ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ

ಗಲ್ಫ್‌ನ ಇನ್ನೊಂದು ತೈಲ ಸಮೃದ್ಧ ದೇಶವಾದ ಕತರ್‌ನಲ್ಲಿ ಇದೇ ಮೊದಲ ಬಾರಿಗೆ ಕೊರೋನದಿಂದ ಸಾವು ಸಂಭವಿಸಿದೆ. ಗುಜರಾತ್ ಮೂಲದ 46 ರ್ಷ ವ್ಯಕ್ತಿ ಸೋಂಕಿನಿಂದ ಮೃತಪಟ್ಟವರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News