ದುಬೈ: ಇಸ್ಲಾಂ ವಿರುದ್ಧ ದ್ವೇಷದ ಕಾಮೆಂಟ್; ಹಾವೇರಿಯ ಯುವಕನನ್ನು ಕೆಲಸದಿಂದ ತೆಗೆದುಹಾಕಿದ ಕಂಪೆನಿ

Update: 2020-04-09 17:00 GMT

ದುಬೈ: ಇಸ್ಲಾಂ ಧರ್ಮದ ವಿರುದ್ಧ ಅವಹೇಳನಕಾರಿ ಕಾಮೆಂಟ್ ಮಾಡಿದ ಭಾರತೀಯ ಉದ್ಯೋಗಿಯನ್ನು ಕೆಲಸದಿಂದ ತೆಗೆದು ಹಾಕಿದ್ದು, ಕಾನೂನು ಕ್ರಮ ಎದುರಿಸಬೇಕಾದ ಘಟನೆ ದುಬೈಯಲ್ಲಿ ನಡೆದಿದೆ.

ಎಮ್ರಿಲ್ ಸರ್ವಿಸಸ್ ಎಂಬ ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ ರಾಕೇಶ್ ಎಂಬಾತ ಅವಹೇಳನಕಾರಿ ಕಾಮೆಂಟ್ ಮಾಡಿದ್ದ ಎಂದು ಆರೋಪಿಸಲಾಗಿದ್ದು, ಆತನನ್ನು ಈಗಾಗಲೇ ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಕಂಪೆನಿಯ ಸಿಇಒ ತಿಳಿಸಿರುವುದಾಗಿ ವರದಿ ಮಾಡಿದೆ.

"ತಕ್ಷಣಕ್ಕೆ ಜಾರಿಗೆ ಬರುವಂತೆ ಕೆಲಸದಿಂದ ತೆಗೆದು ಹಾಕಲಾಗಿದೆ. ದುಬೈ ಪೊಲೀಸರಿಗೆ ಆತನನ್ನು ಹಸ್ತಾಂತರಿಸಲಾಗುವುದು. ದ್ವೇಷದ ಅಪರಾಧಗಳನ್ನು ನಾವು ಕ್ಷಮಿಸುವುದಿಲ್ಲ" ಎಂದವರು ಹೇಳಿದ್ದಾರೆ.

ಕೊರೋನ ವೈರಸ್ ಕುರಿತ ಪೋಸ್ಟ್ ಒಂದಕ್ಕೆ ಫೇಸ್ ಬುಕ್ ನಲ್ಲಿ ಈತ ಪ್ರಚೋದನಕಾರಿ ಕಾಮೆಂಟ್ ಮಾಡಿದ್ದು, ಧಾರ್ಮಿಕ ನಿಂದನೆ ಮಾಡಿದ್ದ ಎಂದು ಆರೋಪಿಸಲಾಗಿದೆ. ಈ ಕಾಮೆಂಟ್ ನ ಸ್ಕ್ರೀನ್ ಶಾಟ್ ವೈರಲ್ ಆದ ತಕ್ಷಣ ಕಂಪೆನಿ ಈ ಕ್ರಮ ಕೈಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News