×
Ad

ದುಬೈ: ಫೇಸ್‌ಬುಕ್‌ನಲ್ಲಿ ದ್ವೇಷ ಕಾರುವ ಬರಹ ಹಾಕಿದ ಭಾರತೀಯನ ವಜಾ

Update: 2020-04-13 22:36 IST

ದುಬೈ, ಎ. 13: ಕೊರೋನ ವೈರಸ್ ಸಾಂಕ್ರಾಮಿಕಕ್ಕೆ ಸಂಬಂಧಿಸಿ ಮುಸ್ಲಿಮ್ ಸಮುದಾಯದ ವಿರುದ್ಧ ಅವಹೇಳನಕಾರಿ ಬರಹವೊಂದನ್ನು ಫೇಸ್‌ಬುಕ್‌ನಲ್ಲಿ ಹಾಕಿದ ಭಾರತೀಯನೊಬ್ಬನನ್ನು ಆತ ಕೆಲಸ ಮಾಡುತ್ತಿರುವ ಯುಎಇಯ ಕಂಪೆನಿಯು ಕೆಲಸದಿಂದ ವಜಾಗೊಳಿಸಿದೆ.

ದುಬೈಯ ಮೊರೊ ಹಬ್ ಡೇಟಾ ಸೊಲ್ಯುಶನ್ಸ್ ಕಂಪೆನಿಯಲ್ಲಿ ಚೀಫ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಹೈದರಾಬಾದ್‌ನ ಬಾಲಕೃಷ್ಣ ನಕ್ಕ ವಜಾಗೊಂಡ ವ್ಯಕ್ತಿಯಾಗಿದ್ದಾನೆ ಎಂದು ‘ಗಲ್ಫ್ ನ್ಯೂಸ್’ ವರದಿ ಮಾಡಿದೆ.

ಅವನು ಹಾಕಿದ ಸಂದೇಶವು ಫೇಸ್‌ಬುಕ್‌ನಲ್ಲಿ ವೈರಲ್ ಆಗಿತ್ತು ಹಾಗೂ ಬಳಿಕ ಅದಕ್ಕೆ ಭಾರೀ ಆಕ್ಷೇಪಗಳು ವ್ಯಕ್ತವಾಗಿದ್ದವು.

‘‘ಇಸ್ಲಾಮೊಫೋಬಿಕ್ ಅಥವಾ ದ್ವೇಷ ಕಾರುವ ಬರಹಗಳ ಬಗ್ಗೆ ಮೊರೊ ಕಂಪೆನಿಯು ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ. ನಮ್ಮ ಗಮನಕ್ಕೆ ತರಲಾಗಿರುವ ಬರಹಗಳು ಯಾವುದೇ ರೀತಿಯಲ್ಲಿ ಮೊರೊ ಕಂಪೆನಿಯ ಬ್ರಾಂಡ್ ಮೌಲ್ಯಗಳನ್ನು ಪ್ರತಿಫಲಿಸುವುದಿಲ್ಲ’’ ಎಂದು ಕಂಪೆನಿಯು ಹೇಳಿಕೆಯೊಂದರಲ್ಲಿ ತಿಳಿಸಿದೆ ಹಾಗೂ ಉದ್ಯೋಗಿಯನ್ನು ಕೆಲಸದಿಂದ ವಜಾಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News