ಕೊರೋನ ಹೆಸರಲ್ಲಿ ದ್ವೇಷದ ಟ್ವೀಟ್ ಮಾಡಿದ ಭಾರತೀಯನಿಗೆ ಶಾರ್ಜಾ ರಾಜಕುಮಾರಿಯಿಂದ ಎಚ್ಚರಿಕೆ

Update: 2020-04-17 11:09 GMT

ದುಬೈ: ದುಬೈಯಲ್ಲಿ ದೊಡ್ಡ ಉದ್ಯಮ ನಡೆಸುತ್ತಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬ ಇಸ್ಲಾಂ ವಿರುದ್ಧ ದ್ವೇಷ ಕಾರುವ  ಟ್ವೀಟ್ ಮಾಡಿದ್ದು, ಈ ಬಗ್ಗೆ ಶಾರ್ಜಾ ರಾಜಕುಮಾರಿ ಶೈಖಾ ಹೆಂದ್ ಅಲ್ ಖಾಸಿಮಿ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ. ನಂತರ ಈ ಉದ್ಯಮಿ ಕಂಪೆನಿಯ ವೆಬ್‍ಸೈಟ್, ಲಿಂಕ್ಡ್ ಇನ್ ಪ್ರೊಫೈಲ್, ಫೇಸ್ ಬುಕ್ ಹಾಗೂ ಟ್ವಿಟರ್ ಖಾತೆಗಳನ್ನು ತೆಗೆದು ಹಾಕಿದ್ದಾನೆ.

ಸೌರಭ್ ಉಪಾಧ್ಯಾಯ ಎಂಬ ಈ ವ್ಯಕ್ತಿ  ರಾಕ್‍ವೆಲ್ ಈವೆಂಟ್ಸ್ ಆ್ಯಂಡ್ ಸೇಲ್ಸ್ ಎಂಬ ಕಂಪೆನಿಯ ಸಿಇಒ ಆಗಿದ್ದು  ಇತ್ತೀಚೆಗೆ ಆತ ಮಾಡಿದ ಕೆಲವು ಟ್ವೀಟ್‍ಗಳು ಹೀಗಿದ್ದವು

“ಶಾಂತಿಯುತ ಜನರು ಹಾಗೂ  ಉಗುಳುವವರ ಬಗ್ಗೆ ಏನನ್ನಬೇಕು ?, 2020ಗಾಗಿ ಹೊಸ ರೀತಿಯ ಜಿಹಾದ್.  ಅವರೆಲ್ಲ ಇನ್ನೂ 1400 ವರ್ಷಗಳಷ್ಟು ಹಿಂದೆಯೇ ಇದ್ದಾರೆ ಹಾಗೂ ಪ್ರಗತಿ ಹೊಂದುವುದು ಮತ್ತು  ಆಡಿದ ಮಾತುಗಳನ್ನು ಬದಲಾಯಿಸುವುದರಲ್ಲಿ ನಂಬಿಕೆಯಿರದವರು ಎಂದು ಅಂದುಕೊಂಡಿದ್ದೆ'', ``ತೀವ್ರಗಾಮಿ ತಬ್ಲೀಗಿ ಉಗ್ರರು ಹಾಗೂ ಇತರ ತೀವ್ರಗಾಮಿ  ಸೈತಾನರ ಪುತ್ರರೇ” ಎಂದು ಈ ಉದ್ಯಮಿ ಟ್ವೀಟ್ ಮಾಡಿದ್ದ.

ಖ್ಯಾತ ಲೇಖಕಿಯೂ ಆಗಿರುವ ರಾಜಕುಮಾರಿ ಹೆಂದ್ ಈ ದ್ವೇಷಪೂರಿತ ಟ್ವೀಟ್ ‍ಗಳನ್ನು ಗಮಿನಿಸಿ “ಯುಎಇಯಲ್ಲಿ ಬಹಿರಂಗವಾಗಿ ಜನಾಂಗೀಯ ನಿಂದನೆ ಹಾಗೂ ತಾರತಮ್ಯಕಾರಿ ನಿಲುವು ಹೊಂದಿದವರಿಗೆ ದಂಡ ವಿಧಿಸಲಾಗುವುದು ಹಾಗೂ ದೇಶ ಬಿಡುವಂತೆ ಮಾಡಲಾಗುವುದು. ಒಂದು ಉದಾಹರಣೆ'' ಎಂದು ಟ್ವೀಟ್ ಮಾಡಿದ್ದರು.

ಈ ಟ್ವೀಟ್ ಬರುತ್ತಲೇ ಉಪಾಧ್ಯಾಯನ ಫೇಸ್ ಬುಕ್, ಟ್ವಿಟರ್ ಖಾತೆಗಳು ಹಾಗೂ ಕಂಪೆನಿ ವೆಬ್ ಸೈಟ್ ನಾಪತ್ತೆಯಾಗಿವೆ. ಕಂಪೆನಿಯ ವೆಬ್ ಸೈಟ್ ಅನ್ನು ಸರಕಾರದ ಆದೇಶದಂತೆ ತೆಗೆದು ಹಾಕಲಾಗಿದೆಯೇ ಅಥವಾ ಸ್ವತಃ ಉಪಾಧ್ಯಾಯ ಈ ಕ್ರಮ ಕೈಗೊಂಡಿದ್ದಾನೆಯೇ ಎಂಬುದು ತಿಳಿದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News