ಛಡಿಯೇಟು ಶಿಕ್ಷೆ ನಿಲ್ಲಿಸಲು ಮುಂದಾಗಿರುವ ಸೌದಿ ಅರೇಬಿಯ

Update: 2020-04-25 15:18 GMT

ರಿಯಾದ್ (ಸೌದಿ ಅರೇಬಿಯ), ಎ. 25: ಶಿಕ್ಷೆಯಾಗಿ ಛಡಿ ಏಟು ನೀಡುವುದನ್ನು ನಿಲ್ಲಿಸಲು ಸೌದಿ ಅರೇಬಿಯ ಮುಂದಾಗಿದೆ ಎನ್ನುವುದನ್ನು ದೇಶದ ಸುಪ್ರೀಂ ಕೋರ್ಟ್‌ನ ದಾಖಲೆಯೊಂದು ಹೇಳಿದೆ ಎಂದು ‘ರಾಯ್ಟರ್ಸ್’ ಶುಕ್ರವಾರ ವರದಿ ಮಾಡಿದೆ.

ಈ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನ ಜನರಲ್ ಕಮಿಶನ್ ಈ ತಿಂಗಳಲ್ಲಿ ತೆಗೆದುಕೊಂಡಿದೆ. ಇನ್ನು ಛಡಿಯೇಟಿನ ಬದಲಾಗಿ ಜೈಲುವಾಸ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲು ಅದು ತೀರ್ಮಾನಿಸಿದೆ.

‘‘ದೊರೆ ಸಲ್ಮಾನ್ ನಿರ್ದೇಶನದಂತೆ ಹಾಗೂ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ನೇರ ಉಸ್ತುವಾರಿಯಲ್ಲಿ ಜಾರಿಗೆ ತರಲಾದ ಮಾನವಹಕ್ಕು ಸುಧಾರಣೆಗಳ ವಿಸ್ತರಣೆಯಾಗಿದೆ’’ ಎಂದು ನ್ಯಾಯಾಲಯದ ದಾಖಲೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News