ಯುಎಇ: ಬಿ.ಆರ್.ಶೆಟ್ಟಿ ಖಾತೆಗಳ ಮುಟ್ಟುಗೋಲಿಗೆ ಬ್ಯಾಂಕ್ ಸೂಚನೆ

Update: 2020-04-26 17:32 GMT

ದುಬೈ,ಎ.26: ವಂಚನೆ ಹಾಗೂ ಫೋರ್ಜರಿ ಪ್ರಕರಣಗಳಿಗೆ ಸಂಬಂಧಿಸಿ ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್.ಶೆಟ್ಟಿ ಹಾಗೂ ಕುಟುಂಬ ದವರ ಯುಇಎನಲ್ಲಿರುವ ಎಲ್ಲಾ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕುವಂತೆ ಸೆಂಟ್ರಲ್‌ ಬ್ಯಾಂಕ್ ಆಫ್ ಯುಎಇ (ಸಿಬಿಯುಎಇ), ದೇಶದಲ್ಲಿರುವ ಎಲ್ಲಾ ಹಣಕಾಸುಸಂಸ್ಥೆಗಳಿಗೆ ನಿರ್ದೇಶನ ನೀಡಿದೆ. ಇದರ ಜೊತೆಗೆ ಬಿ.ಆರ್.ಶೆಟ್ಟಿ ಅವರ ಪಾಲು ದಾರಿಕೆಯಿರುವ ಕಂಪನಿಗಳ ಖಾತೆಗಳನ್ನು ಸ್ತಂಭನಗೊಳಿಸಬೇಕೆಂದು ಆದೇಶಿಸಿದೆ.

ಬಿ.ಆರ್.ಶೆಟ್ಟಿ ಅವರ ಜೊತೆಗೆ ನಂಟು ಹೊಂದಿರುವ ಹಲವು ಕಂಪೆನಿಗಳನ್ನು ಅವುಗಳ ಹಿರಿಯ ಆಡಳಿತವರ್ಗದ ಜೊತೆ ಕಪ್ಪುಪಟ್ಟಿಗೆ ಸೇರ್ಪಡೆಗೊಳಿಸಲು ಸಿಬಿಯುಎಇ ಆದೇಶಿಸಿದೆ.

ಎನ್‌ಎಂಸಿ ಹೆಲ್ತ್ ಕೇರ್ ಸಂಸ್ಥೆಯ ಸಂಸ್ಥಾಪಕರಾಗಿರುವ ಬಿ.ಆರ್.ಶೆಟ್ಟಿ ಸದ್ಯ ಭಾರತದಲ್ಲಿ ಇದ್ದಾರೆನ್ನಲಾಗಿದೆ., ಅವರು ಅಬುಧಾಬಿ ಕಮರ್ಶಿಯಲ್ ಬ್ಯಾಂಕ್‌ನಿಂದ ಸಾಲ ಪಡೆಯಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಹಾಗೂ ತಾನು ಮರುಪಾವತಿಸಲು ಬಾಕಿಯಿರುವ ಸಾಲ ವಿವರಗಳನ್ನು ನೀಡದೆ ವಂಚಿಸಿದ ಆರೋಪವನ್ನು ಎದುರಿಸುತ್ತಿದ್ದಾರೆ.

 ಬಿ.ಆರ್.ಶೆಟ್ಟಿ ಒಡೆತನದ ಎನ್‌ಎಂಸಿ ಹೆಲ್ತ್‌ಕೇರ್ ಸಂಸ್ಥೆಯು, ತನಗೆ 981 ದಶಲಕ್ಷ ಡಾಲರ್ ( ಸುಮಾರು 3.6 ಶತಕೋಟಿ ದಿರ್ಹಮ್) ವಂಚನೆ ನಡೆಸರುವುದಾಗಿ ಅಬುಧಾಬಿ ಕಮರ್ಶಿಯಲ್ ಬ್ಯಾಂಕ್, ಬ್ರಿಟನ್‌ನ ನ್ಯಾಯಾಲಯದಲ್ಲಿ ದೂರು ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News