ಅಪ್ರಾಪ್ತರಾಗಿದ್ದಾಗ ಮಾಡಿದ್ದ ಅಪರಾಧಗಳಿಗೆ ನೀಡುತ್ತಿದ್ದ ಗಲ್ಲುಶಿಕ್ಷೆ ರದ್ದುಗೊಳಿಸಿದ ಸೌದಿ

Update: 2020-04-27 09:08 GMT

ರಿಯಾಧ್: ಅಪ್ರಾಪ್ತರಾಗಿದ್ದಾಗ ನಡೆಸಿದ ಅಪರಾಧಗಳಿಗಾಗಿ ಯಾವುದೇ ವ್ಯಕ್ತಿಗೆ ಸೌದಿ ಅರೇಬಿಯಾ ಇನ್ನು ಮುಂದೆ ಮರಣದಂಡನೆ ವಿಧಿಸುವುದಿಲ್ಲ ಎಂದು ಸರಕಾರದ ಮಾನವ ಹಕ್ಕುಗಳ ಸಂಸ್ಥೆಯ ದೊರೆ ಸಲ್ಮಾನ್ ಅವರ ರಾಜಾಜ್ಞೆಯನ್ನು  ಉಲ್ಲೇಖಿಸಿ ತಿಳಿಸಿದೆ.

ಈ ರಾಜಾಜ್ಞೆಯಂತೆ ಅಪ್ರಾಪ್ತರಿರುವಾಗ ಅಪರಾಧವೆಸಗಿದವರಿಗೆ ಮರಣದಂಡನೆ ವಿಧಿಸದೆ ಹತ್ತು ವರ್ಷ ಮೀರದ ಸೆರೆವಾಸ ಶಿಕ್ಷೆಯನ್ನು ವಿಧಿಸಲಾಗುವುದು. ಈ ಅವಧಿಯನ್ನು ಅವರು  ಬಾಲಾಪರಾಧಿಗಳ ಕೇಂದ್ರಗಳಲ್ಲಿ ಕಳೆಯಬೇಕಿದೆ ಎಂದು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಅವ್ವದ್ ಅಲವ್ವದ್ ಹೇಳಿದ್ದಾರೆ.

ಇರಾನ್ ಮತ್ತು ಚೀನಾದ ನಂತರ ಗರಿಷ್ಠ ಮರಣದಂಡನೆ ವಿಧಿಸುವ ದೇಶ ಸೌದಿ ಅರೇಬಿಯಾ ಆಗಿದೆ. ಕಳೆದ ವರ್ಷ ದೇಶದಲ್ಲಿ 184 ಜನರಿಗೆ  ಮರಣದಂಡನೆ ವಿಧಿಸಲಾಗಿದ್ದು, ಕನಿಷ್ಠ ಒಬ್ಬ ವ್ಯಕ್ತಿಗೆ ಆತ ಅಪ್ರಾಪ್ತನಿರುವಾಗ ನಡೆಸಿದ ಅಪರಾಧಕ್ಕಾಗಿ ಮರಣದಂಡನೆ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News