ಯುಎಇ: ಹಂತ ಹಂತವಾಗಿ ಮಾಲ್‌ಗಳ ಪುನರಾರಂಭ

Update: 2020-05-03 16:13 GMT

ದುಬೈ, ಮೇ 3: ನೋವೆಲ್-ಕೊರೋನ ವೈರಸ್ ಹರಡುವುದನ್ನು ನಿಯಂತ್ರಿಸುವುದಕ್ಕಾಗಿ ಒಂದು ತಿಂಗಳಿಗೂ ಹೆಚ್ಚಿನ ಅವಧಿಯಿಂದ ಯುಎಇಯಲ್ಲಿ ಜಾರಿಯಲ್ಲಿದ್ದ ಬೀಗಮುದ್ರೆಯನ್ನು ಹಂತ ಹಂತವಾಗಿ ತೆರವುಗೊಳಿಸಲಾಗುತ್ತಿದ್ದು, ವಾರಾಂತ್ಯದಲ್ಲಿ ರಾಜಧಾನಿ ಅಬುಧಾಬಿಯ ಮಾಲ್‌ಗಳು ಸೀಮಿತ ಸಂಖ್ಯೆಯ ಜನರಿಗೆ ತೆರೆದಿವೆ.

ಅಬುಧಾಬಿಯ ಮೂರು ಮಾಲ್‌ಗಳು ಶನಿವಾರ 30 ಶೇಕಡ ಗ್ರಾಹಕರಿಗಾಗಿ ಶನಿವಾರ ತೆರೆದವು ಎಂದು ಸರಕಾರಿ ಮಾಧ್ಯಮ ಕಚೇರಿ ಟ್ವೀಟ್ ಮಾಡಿದೆ. ಈ ಸಂದರ್ಭದಲ್ಲಿ ಈ ಮಾಲ್‌ಗಳು ಥರ್ಮಲ್ ಇನ್‌ಸ್ಪೆಕ್ಷನ್ ಸಲಕರಣೆಗಳನ್ನು ಅಳವಡಿಸುವುದು ಒಳಗೊಂಡಂತೆ ಹಲವು ಸುರಕ್ಷಾ ಕ್ರಮಗಳನ್ನು ತೆಗೆದುಕೊಂಡಿದ್ದವು.

ಈ ನಡುವೆ, ಶಾರ್ಜಾದಲ್ಲಿ ರವಿವಾರ ಕೆಲವು ಮಾಲ್‌ಗಳು ತೆರೆದಿವೆ ಎಂದು ಶಾರ್ಜಾ ಎಮಿರೇಟ್ಸ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News