ಅಬುಧಾಬಿ ಬಿಗ್ ಟಿಕೆಟ್ ಲಾಟರಿ: ಸೇಲ್ಸ್ ಮನ್ ಆಗಿದ್ದ ಭಾರತೀಯನಿಗೆ 20 ಕೋಟಿ ರೂ.

Update: 2020-05-04 16:18 GMT

ಅಬುಧಾಬಿ, ಮೇ 4: ಅಬುಧಾಬಿಯಲ್ಲಿ ರವಿವಾರ ನಡೆದ ಬಿಗ್ ಟಿಕೆಟ್ ಲಾಟರಿ ಡ್ರಾದಲ್ಲಿ ಭಾರತೀಯರೊಬ್ಬರು 10 ಮಿಲಿಯ ದಿರ್ಹಮ್ (ಸುಮಾರು 20.05 ಕೋಟಿ ರೂಪಾಯಿ) ಗೆದ್ದಿದ್ದಾರೆ.

 ಅಜ್ಮಾನ್‌ನಲ್ಲಿನ ವಾಹನ ಬಿಡಿ ಭಾಗಗಳ ಅಂಗಡಿಯಲ್ಲಿ ಸೇಲ್ಸ್‌ಮನ್ ಆಗಿ ಕೆಲಸ ಮಾಡುತ್ತಾ ತಿಂಗಳಿಗೆ 5,000 ದಿರ್ಹಮ್ (ಸುಮಾರು 1.03 ಲಕ್ಷ ರೂಪಾಯಿ) ಸಂಪಾದಿಸುತ್ತಿರುವ ದಿಲೀಪ್‌ಕುಮಾರ್ ಎಲ್ಲಿಕೊಟ್ಟಿಲ್ ಪರಮೇಶ್ವರನ್ ವಿಜೇತರಾಗಿದ್ದಾರೆ. ಅವರು ಕೇರಳದ ತ್ರಿಶೂರು ಜಿಲ್ಲೆಯವರು.

ಪರಮೇಶ್ವರನ್ ಏಳು ವರ್ಷಗಳಿಂದ ಯುಎಇಯಲ್ಲಿ ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News