ದುಬೈ: ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ ಭಾರತ ಮೂಲದ ಕೊರೋನ ಸೋಂಕಿತ ಮಹಿಳೆ

Update: 2020-05-07 12:02 GMT

ದುಬೈ: ಕೋವಿಡ್-19 ಸೋಂಕಿಗೆ ತುತ್ತಾಗಿರುವ ಭಾರತೀಯ ಮೂಲದ 25 ವರ್ಷದ ಮಹಿಳೆಯೊಬ್ಬರು ದುಬೈನ ಅಲ್ ಝಹ್ರಾ ಆಸ್ಪತ್ರೆಯಲ್ಲಿ ಆರೋಗ್ಯವಂತ ಗಂಡು ಶಿಶುವಿಗೆ ಜನ್ಮ ನೀಡಿದ್ದಾರೆ.

ವೈದ್ಯರು ಹೆರಿಗೆಯ ದಿನಾಂಕವನ್ನು ಮೇ 19 ಎಂದು ಅಂದಾಜಿಸಿದ್ದರೂ ಸುಮಾರು 17 ದಿನಗಳಿಗೆ ಮುಂಚಿತವಾಗಿಯೇ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡು ಆಕೆ 3.8 ಕೆಜಿ ತೂಕದ ಮಗುವಿಗೆ ಜನ್ಮ ನೀಡಿದ್ದಾರೆ.

ಮಗುವನ್ನೂ ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದೆ, ತಾಯಿ ಹಾಗೂ ಮಗು ಮೂರು ಬಾರಿ ಕೋವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್ ಬಂದ ನಂತರವಷ್ಟೇ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗುವುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ತಾಯಿಗೆ ಕೊರೋನ ಸೋಂಕು ಇದ್ದರೂ ತಾಯಿ ಮಗುವನ್ನು ಒಂದೇ ಕೊಠಡಿಯಲ್ಲಿರಿಸಲಾಗಿದೆ. ಮಗುವಿಗೆ ಎದೆಹಾಲು ನೀಡುವುದರಿಂದ ಕೊರೋನ ಸೋಂಕು ಹರಡುವುದಿಲ್ಲ ಎಂದು ಅಮೆರಿಕಾದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಎಂಡ್ ಪ್ರಿವೆನ್ಶನ್ ಹೇಳಿದೆ.

ಹೊಸ ತಾಯಂದಿರು ಶಿಶುವನ್ನು ಮುಟ್ಟುವ ಮೊದಲು ಹಾಗೂ ನಂತರ ಕೈಗಳನ್ನು ತೊಳೆದುಕೊಳ್ಳಬೇಕು ಹಾಗೂ ಮುಖಕ್ಕೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ಆಸ್ಪತ್ರೆಯ ಸ್ತ್ರೀರೋಗ ವಿಭಾಗದ ಮುಖ್ಯಸ್ಥರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News