ಕುವೈತ್: ಮೇ 30ರವರೆಗೆ ಸಂಪೂರ್ಣ ಕರ್ಫ್ಯೂ

Update: 2020-05-09 16:34 GMT

ಕುವೈತ್ ಸಿಟಿ, ಮೇ 9: ನೋವೆಲ್-ಕೊರೋನ ವೈರಸ್‌ನ ಹರಡುವಿಕೆಯನ್ನು ನಿಯಂತ್ರಿಸುವುದಕ್ಕಾಗಿ ರವಿವಾರ ಸಂಜೆ 4 ಗಂಟೆಯಿಂದ ಮೇ 30ರವರೆಗೆ ಸಂಪೂರ್ಣ ಕರ್ಫ್ಯೂ ವಿಧಿಸಲು ಕುವೈತ್ ಸರಕಾರ ಶುಕ್ರವಾರ ನಿರ್ಧರಿಸಿದೆ.

ನಿರ್ಬಂಧಗಳ ಭಾಗವಾಗಿ ಜನರಿಗೆ ದಿನಕ್ಕೆ ಎರಡು ಗಂಟೆ ತಮ್ಮ ನಿವಾಸಕ್ಕೆ ಒಳಪಟ್ಟ ಪ್ರದೇಶಗಳಲ್ಲಿ ವ್ಯಾಯಾಮ ಮಾಡಲು ಅವಕಾಶ ನೀಡಲಾಗುವುದು. ಈ ಸಂದರ್ಭದಲ್ಲಿ ಜನರು ಕಾರುಗಳನ್ನು ಬಳಸುವಂತಿಲ್ಲ. ಪ್ರತಿ ದಿನ ಸಂಜೆ 4:30ರಿಂದ 6:30ರವರೆಗೆ ಜನರು ವ್ಯಾಯಾಮ ಮಾಡಬಹುದು. ಆದರೆ, ವ್ಯಾಯಾಮ ಮಾಡುವಾಗ ಜನರು ಮುಖಕವಚಗಳನ್ನು ಧರಿಸಬೇಕು ಹಾಗೂ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಉಪ ಪ್ರಧಾನಿ ಹಾಗೂ ಆಂತರಿಕ ಸಚಿವ ಅನಸ್ ಅಲ್ ಸಾಲಿಹ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಕುವೈತ್‌ನಲ್ಲಿ ಈವರೆಗೆ 7,208 ಕೊರೋನ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ ಹಾಗೂ 47 ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News