ಸೌದಿ ಅರೇಬಿಯಾದಲ್ಲಿ ವ್ಯಾಟ್ 3 ಪಟ್ಟು ಹೆಚ್ಚಳ

Update: 2020-05-11 16:37 GMT

ರಿಯಾದ್ (ಸೌದಿ ಅರೇಬಿಯ), ಮೇ 11: ಕೊರೋನ ವೈರಸ್ ಆರ್ಥಿಕತೆಯ ಮೇಲೆ ನೀಡಿರುವ ಹೊಡೆತದ ಪರಿಣಾಮಗಳನ್ನು ಎದುರಿಸುವುದಕ್ಕಾಗಿ ಸೌದಿ ಅರೇಬಿಯದಲ್ಲಿ ಮೌಲ್ಯ ವರ್ಧಿತ ತೆರಿಗೆ (ವ್ಯಾಟ್)ಯು ಮೂರು ಪಟ್ಟಾಗಲಿದೆ ಹಾಗೂ ನಾಗರಿಕರಿಗೆ ನೀಡಲಾಗುತ್ತಿದ್ದ ತಿಂಗಳ ನಗದು ಭತ್ತೆಯನ್ನು ರದ್ದುಪಡಿಸಲಾಗುವುದು ಎಂದು ಹಣಕಾಸು ಸಚಿವ ಮುಹಮ್ಮದ್ ಅಲ್-ಜದಾನ್ ಸೋಮವಾರ ಹೇಳಿದ್ದಾರೆ.

ಜೀವನ ವೆಚ್ಚ ಭತ್ತೆಯನ್ನು 2020 ಜೂನ್‌ನಿಂದ ನಿಲ್ಲಿಸಲು ಹಾಗೂ ಜುಲೈ 1ರಿಂದ ವ್ಯಾಟನ್ನು 5 ಶೇಕಡದಿಂದ 15 ಶೇಕಡಕ್ಕೆ ಏರಿಸಲು ನಿರ್ಧರಿಸಲಾಗಿದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ ಎಂದು ದೇಶದ ಅಧಿಕೃತ ಸುದ್ದಿಸಂಸ್ಥೆ ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.

ನೋವೆಲ್-ಕೊರೋನ ವೈರಸ್ ಮತ್ತು ಇಳಿಯುತ್ತಿರುವ ತೈಲ ಬೆಲೆ ನೀಡಿರುವ ಅವಳಿ ಆಘಾತವನ್ನು ಎದುರಿಸಲು ಖರ್ಚು ಕಡಿಮೆ ಮಾಡುವ ತುರ್ತು ಯೋಜನೆಗಳನ್ನು ಸರಕಾರ ರೂಪಿಸುತ್ತಿದೆ ಹಾಗೂ ಇದು ಯಾತನಾದಾಯಕ ಮತ್ತು ಕಠಿಣವಾಗಿರಬಹುದು ಎಂಬ ಎಚ್ಚರಿಕೆಯನ್ನು ಸರಕಾರ ಕಳೆದ ವಾರ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News