ವೀಸಾ ದಂಡ ಮನ್ನಾ ಆಗಿ ಯುಎಇ ತೊರೆಯುವವರಿಗೆ ಮತ್ತೆ ಯುಎಇ ಪ್ರವೇಶಿಸಲು ಅವಕಾಶ

Update: 2020-05-14 15:43 GMT

ದುಬೈ, ಮೇ 14: ವೀಸಾ ದಂಡ ಮನ್ನಾ ಆಗಿ ಮೇ 18ರ ಬಳಿಕ ಯುಎಇ ತೊರೆಯುವ ವಿದೇಶೀಯರನ್ನು ಮತ್ತೆ ದೇಶ ಪ್ರವೇಶಿಸದಂತೆ ನಿಷೇಧಿಸುವುದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯುಎಇ ಅಧ್ಯಕ್ಷ ಶೇಖ್ ಖಲೀಫ ಬಿನ್ ಝಾಯೇದ್ ಅಲ್ ನಹ್ಯಾನ್‌ರ ಸೂಚನೆಯಂತೆ ಎಲ್ಲ ವೀಸಾ ಸಂಬಂಧಿ ದಂಡಗಳನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗಿದೆ ಎಂದು ಯುಎಇ ಬುಧವಾರ ಘೋಷಿಸಿದೆ.

2020 ಮಾರ್ಚ್ 1ರ ಮೊದಲು ವಾಯಿದೆ ಮುಗಿದ ಪ್ರವೇಶ ಮತ್ತು ವಾಸ್ತವ್ಯ ಪರ್ಮಿಟ್‌ಗಳನ್ನು ಹೊಂದಿರುವವರು ಮೇ 18ರ ಬಳಿಕ ದೇಶ ತೊರೆದರೆ ಅವರು ದಂಡ ಪಾವತಿಸಬೇಕಾಗಿಲ್ಲ. ಜೊತೆಗೆ ಮೂರು ತಿಂಗಳ ಹೆಚ್ಚುವರಿ ವಿನಾಯಿತಿ ಅವಧಿ (ಗ್ರೇಸ್ ಪೀರಿಯಡ್)ಯನ್ನೂ ನೀಡಲಾಗಿದೆ.

ಹೊಸ ಆದೇಶದ ಪ್ರಯೋಜನವನ್ನು ಪಡೆಯುವವರಿಗೆ ಪ್ರವೇಶ ನಿಷೇಧ ಅನ್ವಯಿಸುವುದಿಲ್ಲ ಹಾಗೂ ಅವರು ದೇಶವನ್ನು ಮತ್ತೆ ಪ್ರವೇಶಿಸಬಹುದು ಎಂದು ಗುರುತು ಮತ್ತು ಪೌರತ್ವ ಪ್ರಾಧಿಕಾರದ ವಕ್ತಾರ ಬ್ರಿಗೇಡಿಯರ್ ಖಾಮಿಸ್ ಅಲ್ ಕಾಬಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News