ಇಸ್ರೇಲ್ ತಲುಪಿದ ಯುಎಇ ಫೆಲೆಸ್ತೀನ್‌ಗೆ ಕಳುಹಿಸಿದ ನೆರವು ಸಾಮಗ್ರಿ

Update: 2020-05-20 15:09 GMT

ಅಬುಧಾಬಿ (ಯುಎಇ), ಮೇ 20: ಕೊರೋನ ವೈರಸ್ ಸಾಂಕ್ರಾಮಿಕವನ್ನು ಎದುರಿಸುವ ನಿಟ್ಟಿನಲ್ಲಿ ಫೆಲೆಸ್ತೀನ್‌ಗೆ ನೆರವಾಗುವುದಕ್ಕಾಗಿ ಆ ದೇಶಕ್ಕೆ ಯುಎಇ ಕಳುಹಿಸಿರುವ ಪರಿಹಾರ ಸಾಮಗ್ರಿಗಳನ್ನು ಹೊತ್ತ ವಿಮಾನವು ಮಂಗಳವಾರ ಇಸ್ರೇಲ್ ತಲುಪಿದೆ.

ಜೋರ್ಡಾನ್ ಮತ್ತು ಈಜಿಪ್ಟ್‌ಗಳನ್ನು ಹೊರತುಪಡಿಸಿ, ಅರಬ್ ದೇಶಗಳು ಇಸ್ರೇಲ್‌ನೊಂದಿಗೆ ಅಧಿಕೃತ ಸಂಬಂಧ ಹೊಂದಿಲ್ಲ. ಆದರೆ ಯುಎಇಯಂತಹ ಕೊಲ್ಲಿ ಅರಬ್ ದೇಶ ಮತ್ತು ಇಸ್ರೇಲ್ ನಡುವೆ ಇತ್ತೀಚಿನ ದಿನಗಳಲ್ಲಿ ಸಂಬಂಧ ಬೆಳೆಯುತ್ತಿದೆ. ಇರಾನ್ ಕುರಿತ ಭಯವೇ ಈ ಎರಡು ದೇಶಗಳನ್ನು ಒಗ್ಗೂಡಿಸಿದೆ.

ಎತಿಹಾದ್ ಏರ್‌ವೇಸ್ ವಿಮಾನವು ಮಾನವೀಯ ನೆರವಾಗಿ ಫೆಲೆಸ್ತೀನ್‌ಗೆ ಯುಎಇ ಕಳುಹಿಸಿರುವ ವೈದ್ಯಕೀಯ ಸಲಕರಣೆಗಳ ಸರಕನ್ನು ಮೇ 19ರಂದು ಅಬುಧಾಬಿಯಿಂದ ಟೆಲ್ ಅವೀವ್‌ಗೆ ಸಾಗಿಸಿದೆ ಎಂದು ಎತಿಹಾದ್ ವಕ್ತಾರರೊಬ್ಬರು ತಿಳಿಸಿದರು.

14 ಟನ್ ಸರಕಿನಲ್ಲಿ ವೈಯಕ್ತಿಕ ರಕ್ಷಣಾ ಸಲಕರಣೆ (ಪಿಪಿಇ), 10 ವೆಂಟಿಲೇಟರ್‌ಗಳು ಹಾಗೂ ಇತರ ಅಗತ್ಯ ವೈದ್ಯಕೀಯ ಸಲಕರಣೆಗಳು ಒಳಗೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News