ಇಸ್ಲಾಮೋಫೋಬಿಕ್ ಪೋಸ್ಟ್: ಉನ್ನತ ಹುದ್ದೆಯಲ್ಲಿದ್ದ ಭಾರತೀಯ ವ್ಯಕ್ತಿಯನ್ನು ವಜಾಗೊಳಿಸಿದ ಸೌದಿಯ ವಿವಿ

Update: 2020-05-21 17:08 GMT

ಸಾಮಾಜಿಕ ಜಾಲತಾಣದಲ್ಲಿ ಇಸ್ಲಾಮೋಫೋಬಿಕ್ ಪೋಸ್ಟ್ ಗಳನ್ನು ಹಾಕಿದ್ದ ಭಾರತ ಮೂಲದ, ಉನ್ನತ ಹುದ್ದೆಯಲ್ಲಿದ್ದ ವ್ಯಕ್ತಿಯೊಬ್ಬರನ್ನು ಸೌದಿ ಅರೇಬಿಯಾದ ವಿವಿಯೊಂದು ವಜಾಗೊಳಿಸಿದೆ.

ಈಗಾಗಲೇ ಗಲ್ಫ್ ರಾಷ್ಟ್ರಗಳಲ್ಲಿ, ಕೆನಡಾ ಮತ್ತು ನ್ಯೂಝಿಲ್ಯಾಂಡ್ ಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ದ್ವೇಷ ಹರಡುತ್ತಿದ್ದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

“ವಿವಿಯ ಅಧಿಕಾರಿಗಳು ವರದಿ ನೀಡಿದಂತೆ ಪ್ರಚೋದನಕಾರಿ ಪೋಸ್ಟ್ ಗಳು ಮತ್ತು ಟ್ವೀಟ್ ಗಳಿಗಾಗಿ ಶಿಕ್ಷಕರೊಬ್ಬರ ರಿಜಿಸ್ಟ್ರೇಶನ್ ಅನ್ನು ರದ್ದುಗೊಳಿಸಲಾಗಿದೆ. ಇಲ್ಲಿನ ಉದಾತ್ತ ನಾಯಕತ್ವದ ದಾರಿಗೆ ತಡೆಯಾಗುವ ಅಥವಾ ಸಾಮಾನ್ಯ ನಿಯಮಗಳ ಮೇಲೆ ಪರಿಣಾಮ ಬೀರುವ ಯಾವುದೇ ಉಗ್ರಗಾಮಿ/ತೀವ್ರವಾದದ ಸಿದ್ಧಾಂತಗಳ ವಿರುದ್ಧ ಜಝಾನ್ ಯುನಿವರ್ಸಿಟಿ ಕಠಿಣ ಕ್ರಮ ಕೈಗೊಳ್ಳುತ್ತದೆ” ಎಂದು ಜಝಾನ್ ವಿವಿ ಟ್ವೀಟ್ ಮೂಲಕ ತಿಳಿಸಿದೆ.

ಪ್ರಚೋದನಕಾರಿ ಟ್ವೀಟ್ ಮಾಡಿದ ವ್ಯಕ್ತಿ ಡಾ. ನೀರಜ್ ಬೇಡಿ ಎಂಬಾತ ಎಂದು ಕೆಲವು ಟ್ವಿಟರಿಗರು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತನ್ನ ಪೋಸ್ಟ್ ಗಳಲ್ಲಿ ನೀರಜ್ ಬೇಡಿ ಮುಸ್ಲಿಮರನ್ನು ಮತ್ತು ಇಸ್ಲಾಂ ಧರ್ಮವನ್ನು ನಿಂದಿಸಿದ್ದ. ಕೊರೋನ ವೈರಸ್ ಹರಡಲು ಮುಸ್ಲಿಮರೇ ಕಾರಣ ಎಂದಿದ್ದ ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News