ಅಬುಧಾಬಿ: ಭಾರತೀಯ ಶಿಕ್ಷಕ ಕೊರೋನ ವೈರಸ್‌ಗೆ ಬಲಿ

Update: 2020-05-25 15:37 GMT

ದುಬೈ, ಮೇ 25: ಯುಎಇಯಲ್ಲಿ 50 ವರ್ಷದ ಭಾರತೀಯ ಶಿಕ್ಷಕರೊಬ್ಬರು ರವಿವಾರ ಕೊರೋನ ವೈರಸ್‌ಗೆ ಬಲಿಯಾಗಿದ್ದಾರೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.

ಅಬುಧಾಬಿಯ ಸನ್‌ರೈಸ್ ಸ್ಕೂಲ್‌ನಲ್ಲಿ ಹಿಂದಿ ಶಿಕ್ಷಕರಾಗಿದ್ದ ಅನಿಲ್ ಕುಮಾರ್ ಮೃತಪಟ್ವವರು. ಅವರು ಕೊರೋನ ಸೋಂಕಿಗೆ ಒಳಗಾಗಿರುವುದು ಮೇ 7ರಂದು ಪತ್ತೆಯಾಗಿತ್ತು.

ಸನ್‌ರೈಸ್ ಸ್ಕೂಲ್‌ನಲ್ಲಿ ಹಿರಿಯ ಹಿಂದಿ ಶಿಕ್ಷಕರಾಗಿದ್ದ ಅನಿಲ್ ಕುಮಾರ್‌ರ ಆಘಾತಕಾರಿ ಮರಣದಿಂದ ಇಡೀ ಸನ್‌ರೈಸ್ ಕುಟುಂಬವು ಶೋಕಕ್ಕೆ ಒಳಗಾಗಿದೆ ಎಂದು ಹೇಳಿಕೆಯೊಂದರಲ್ಲಿ ಸನ್‌ರೈಸ್ ಸ್ಕೂಲ್ ತಿಳಿಸಿದೆ.

ಕುಮಾರ್ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ಪತ್ನಿ ರಜನಿ ಅದೇ ಶಾಲೆಯಲ್ಲಿ ಗಣಿತ ಕಲಿಸುತ್ತಾರೆ.

ಯುಎಇಯಲ್ಲಿ ಕೊರೋನ ವೈರಸ್‌ಗೆ ಈವರೆಗೆ 245 ಮಂದಿ ಬಲಿಯಾಗಿದ್ದಾರೆ ಹಾಗೂ ಅಲ್ಲಿ ಸುಮಾರು 30,000 ಸೋಂಕು ಪ್ರಕರಣಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News